ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಝುಕಿ ಇಂಡಿಯಾ ಇದೀಗ ತನ್ನ ಐದು ಕಾರುಗಳ ಸಿಎನ್‌ಜಿ ಮಾಡೆಲ್‌ಗಳನ್ನೂ ಬಿಡುಗಡೆ ಮಾಡಿದೆ.
ಭಾರತದ ಅತೀ ಮಾರಾಟವಾಗುವ ಜನಪ್ರಿಯ, ಮಧ್ಯಮ ವರ್ಗದ ಜನತೆಯ ಬಂಧು ಆಲ್ಟೋ ಕಾರು ಸೇರಿದಂತೆ, ಎಸ್ಟಿಲೋ, ವ್ಯಾಗನರ್, ಬಹುಪಯೋಗಿ ಇಕೋ ಹಾಗೂ ಸೆಡಾನ್ ಮಾದರಿಯ ಎಸ್‌ಎಕ್ಸ್4 ಕಾರುಗಳ ಸಿಎನ್‌ಜಿ ಮಾಡೆಲ್ ಇದೀಗ ಬಿಡುಗಡೆ ಕಂಡವುಗಳು.
ಕಾರು ಮಾರಾಟ ಕುಸಿತ ಕಂಡ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಮರು ಚೈತನ್ಯ ನೀಡುವ ಹಿನ್ನೆಲೆಯಲ್ಲಿ ಮಾರುತಿ ಸುಝುಕಿ ಈ ಕಾರ್ಯ ಮಾಡಿದೆ. ಈ ಸಿಎನ್‌ಜಿ ಕಾರುಗಳ ಬೆಲೆ 3.23 ಲಕ್ಷ ರೂಪಾಯಿಗಳಿಂದ 7.47 ಲಕ್ಷ ರೂಪಾಯಿಗಳೊಳಗೆ ಲಭ್ಯವಿವೆ.