ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೆಪೋ ಏರಿಕೆ : ಎಸ್‌ಬಿಐನಿಂದ ಬಡ್ಡಿ ದರ ಹೆಚ್ಚಳ ಘೋಷಣೆ (SBI | Lending rate | Raise | Corporate loans | Reserve Bank of India)
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ,ಗೃಹ, ವಾಹನ ಮತ್ತು ಕಾರ್ಪೋರೇಟ್ ಸಾಲಗಳ ಬಡ್ಡಿ ದರದಲ್ಲಿ 50ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ,ಗ್ರಾಹಕರ ಸ್ಥಿರ ಠೇವಣಿ ಬಡ್ಡಿ ದರಗಳಲ್ಲಿ ಕೂಡಾ 150 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆಯಾಗಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೋ ದರಗಳನ್ನು ಹೆಚ್ಚಿಸಿದ ನಂತರ ಬ್ಯಾಂಕ್‌ಗಳು ಕೂಡಾ ಬಡ್ಡಿ ದರದಲ್ಲಿ ಹೆಚ್ಚಳಗೊಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್ , ರೆಪೋ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸಿದ್ದು, ಅಗಸ್ಟ್ 17 ರಿಂದ ಜಾರಿಗೆ ಬರಲಿವೆ ಎಂದು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
181ದಿನಗಳವರೆಗಿನ ಸ್ಥಿರ ಠೇವಣಿಯನ್ನು ಶೇ.5.25ರಿಂದ ಶೇ.6ಕ್ಕೆ ಏರಿಕೆಗೊಳಿಸಿದೆ.555 ದಿನಗಳವರೆಗಿನ ಠೇವಣಿಯ ಬಡ್ಡಿ ದರದಲ್ಲಿ ಶೇ.5.25ರಿಂದ ಶೇ.7.25ಕ್ಕೆ ಏರಿಕೆಗೊಳಿಸಿದೆ.