ಟೆಲಿಕಾಂ ಕ್ಷೇತ್ರದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಬ್ಲ್ಯಾಕ್ ಬೆರ್ರಿ ಸೇವೆಗಳಲ್ಲಿ ಬಿಕ್ಕಟ್ಟು ತಂದಿದೆ.ಭದ್ರತಾ ಕಳವಳದಿಂದಾಗಿ ರಿಸರ್ಚ್ ಇನ್ ಮೋಶನ್ ಕಂಪೆನಿಯ ಉತ್ಪನ್ನಕ್ಕೆ ಸೇವೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿಲ್ಲ ಎಂದು ಟೆಲಿಕಾಂ ಇಲಾಖೆಯ ಸಚಿವಾಲಯ ಸ್ಪಷ್ಟಪಡಿಸಿದೆ.
ಟೆಲಿಕಾಂ ಸಚಿವಾಲಯದ ಹಿರಿಯ ಅಧಿಕಾರಿಗಳ ಪ್ರಕಾರ,ಸರ್ವರ್ ಅಳವಡಿಸದಿದ್ದಲ್ಲಿ, ಬ್ಲ್ಯಾಕ್ ಬೆರ್ರಿ ಸೇವೆಗೆ ಸರಕಾರ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ, ಒಂಬತ್ತು ಟೆಲಿಕಾಂ ಕಂಪೆನಿಗಳು ಬ್ಲ್ಯಾಕ್ ಬೆರ್ರಿ ಸೇವೆಗಳನ್ನು ನೀಡಲು ಸಿದ್ಧವಾಗಿವೆ. ಸಂಕೀರ್ಣವಾದ ಸಂದೇಶ ವ್ಯವಸ್ಥೆಯಿಂದಾಗಿ ದೇಶದ ಭದ್ರತೆಗೆ ಸಮಸ್ಯೆಯನ್ನು ಸೃಷ್ಟಿಸಬಹುದು ಎನ್ನುವ ಆತಂಕದಿಂದಾಗಿ ಟೆಲಿಕಾಂ ಇಲಾಖೆ, ಬ್ಲ್ಯಾಕ್ ಬೆರ್ರಿ ಸೇವೆಗಳನ್ನು ನೀಡಲು ನಿರಾಕರಿಸಿದೆ.