ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಾಟಾ ಮೋಟಾರ್ಸ್‌ ವಾಹನಗಳ ಮಾರಾಟದಲ್ಲಿ ಹೆಚ್ಚಳ (Tata Motors | Global sales | Vehicles | Jaguar)
Bookmark and Share Feedback Print
 
ದೇಶದ ವಾಹನೋದ್ಯಮ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್, ಜುಲೈ ತಿಂಗಳ ಅವಧಿಯ ಮಾರಾಟದಲ್ಲಿ ಶೇ.36ರಷ್ಟು ಹೆಚ್ಚಳವಾಗಿದ್ದು, 90,646 ವಾಹನಗಳನ್ನು ಮಾರಾಟ ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಟಾಟಾಮೋಟಾರ್ಸ್‌ನ ಇಂಗ್ಲೆಂಡ್ ಮೂಲದ ಜಾಗ್ವಾರ್ ಮತ್ತು ಲಾಂಡ್‌ರೋವರ್ ಕಂಪೆನಿಯ ವಾಹನಗಳ ಮಾರಾಟದಲ್ಲಿ ಶೇ.30ರಷ್ಟು ಹೆಚ್ಚಳವಾಗಿ,19,386 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಜುಲೈ ತಿಂಗಳ ಅವಧಿಯಲ್ಲಿ 5,676 ಜಾಗ್ವಾರ್ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ವಾಹನಗಳ ಮಾರಾಟದಲ್ಲಿ ಶೇ.26ರಷ್ಟು ಹೆಚ್ಚಳವಾಗಿದೆ.ಲಾಂಡ್ ರೋವರ್ ಮಾಡೆಲ್‌ನ ವಾಹನಗಳ ಮಾರಾಟದಲ್ಲಿ ಶೇ.31ರಷ್ಟು ಹೆಚ್ಚಳವಾಗಿ 13,710 ವಾಹನಗಳನ್ನು ಮಾರಾಟ ಮಾಡಲಾಗಿದೆ.

ಜುಲೈ ತಿಂಗಳ ಅವಧಿಯಲ್ಲಿ ಟ್ರಕ್ ಮತ್ತು ಬಸ್ ವಾಹನಗಳ ಮಾರಾಟದಲ್ಲಿ ಶೇ.30ರಷ್ಟು ಏರಿಕೆಯಾಗಿ, 40,576ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್‌ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ