ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಉತ್ತರಾಧಿಕಾರಿಯನ್ನು ಹುಡುಕಾಟ ನಡೆಸುತ್ತಿರುವ ಸಂದರ್ಭದಲ್ಲಿಯೇ,ಅಂಬಾನಿ ಸೋಹದರರನ್ನು ಹಿಂದಿಕ್ಕಿ ಶ್ರೀಮಂತಿಕೆಯಲ್ಲಿ ದೇಶದ ನಂಬರ್ ಒನ್ ಕಂಪೆನಿ ಎನ್ನುವ ಗೌರವಕ್ಕೆ ಪಾತ್ರವಾಗಿದೆ.
ಟಾಟಾ ಗ್ರೂಪ್ ನಂತರದ ಸ್ಥಾನವನ್ನು ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್ ಇಂಡಸ್ಟ್ರಿ(3,21,750ಕೋಟಿ ರೂ.)ಹೊಂದಿದೆ.ಅನಿಲ್ ಅಗರ್‌ವಾಲ್ ಸಂಚಾಲಿತ ಸ್ಟೆರ್ಲೈಟ್ ಗ್ರೂಪ್ (1,35,300 ಕೋಟಿ ರೂ.)ಮೂರನೇ ಸ್ಥಾನವನ್ನು ಹೊಂದಿದೆ.
ಅನಿಲ್ ಅಂಬಾನಿ ಸಂಚಾಲಿತ ಎಡಿಎಜಿ ಗ್ರೂಪ್ (1,25,000ಕೋಟಿ ರೂ.)ನಾಲ್ಕನೇ ಸ್ಥಾನದಲ್ಲಿದೆ.ಸುನೀಲ್ ಮಿತ್ತಲ್ ಮಾಲೀಕತ್ವದ ಭಾರ್ತಿ ಗ್ರೂಪ್ (1,20,500 ಕೋಟಿ ರೂ)ಐದನೇ ಸ್ಥಾನವನ್ನು ಪಡೆದಿದೆ.
PTI
ಏತನ್ಮಧ್ಯೆ, ಮುಕೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಸಹೋದರರ ಕಂಪೆನಿಗಳನ್ನು ಒಂದಾಗಿಸಿದಲ್ಲಿ, ಟಾಟಾ ಗ್ರೂಪ್ ಸಂಸ್ಥೆ ಸಂಪತ್ತಿನಲ್ಲಿ ಎರಡನೇ ಸ್ಥಾನವನ್ನು ಪಡೆಯಲಿದೆ
ಅಂಬಾನಿ ಸಹೋದರರ ಉಭಯ ಕಂಪೆನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 4,47,000ಕೋಟಿ ರೂಪಾಯಿಗಳಾಗಲಿದ್ದು, ಟಾಟಾ ಗ್ರೂಪ್‌ಗಿಂತ 77,000 ಕೋಟಿ ರೂಪಾಯಿಗಳಿಗಿಂತ ಹೆಚ್ಚಳವಾಗಲಿದೆ. ಟಾಟಾ ಗ್ರೂಪ್‌ನ ಒಟ್ಟು ಮಾರುಕಟ್ಟೆ ಮೌಲ್ಯ 3,26,000 ಕೋಟಿ ರೂಪಾಯಿಗಳಾಗಲಿವೆ.