ಹಬ್ಬದ ಸೀಜನ್ ಖರೀದಿ: ಪ್ರತಿ 10ಗ್ರಾಂ ಚಿನ್ನಕ್ಕೆ 18,870 ರೂ.
ನವದೆಹಲಿ, ಸೋಮವಾರ, 16 ಆಗಸ್ಟ್ 2010( 19:54 IST )
PTI
ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನ ಮಧ್ಯೆಯು ಹಬ್ಬದ ಸೀಜನ್ ಬೇಡಿಕೆಯ ಹಿನ್ನೆಲೆಯಲ್ಲಿ, ಆಭರಣಗಳ ತಯಾರಕರು ಹಾಗೂ ಚಿನ್ನದ ಸಂಗ್ರಹಕಾರರಿಂದ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕಳೆದ ನಾಲ್ಕು ದಿನಗಳ ವಹಿವಾಟಿನಲ್ಲಿ 430 ರೂಪಾಯಿ ಚೇತರಿಕೆ ಕಂಡ ಚಿನ್ನದ ದರ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 75 ರೂಪಾಯಿಗಳ ಏರಿಕೆಯಾಗಿ ಪ್ರತಿ10ಗ್ರಾಂಗೆ 18,870 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನ ಮಧ್ಯೆಯು ಹಬ್ಬದ ಸೀಜನ್ ಬೇಡಿಕೆಯ ಹಿನ್ನೆಲೆಯಲ್ಲಿ, ಆಭರಣಗಳ ತಯಾರಕರು ಹಾಗೂ ಚಿನ್ನದ ಸಂಗ್ರಹಕಾರರಿಂದ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿರುವುದರಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕತೆ ಕುಸಿಯುವ ಆತಂಕದಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 6.50 ಡಾಲರ್‌ಗಳ ಏರಿಕೆಯಾಗಿ, 1,221.90 ಡಾಲರ್‌ಗಳಿಗೆ ತಲುಪಿದೆ.