ವಿಶ್ವಬ್ಯಾಂಕ್‌ನಿಂದ ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ಸಾಲ
ವಾಷಿಂಗ್ಟನ್, ಮಂಗಳವಾರ, 17 ಆಗಸ್ಟ್ 2010( 12:20 IST )
ಪ್ರವಾಹ ಪ್ರಕೋಪದಲ್ಲಿ ಸಿಲುಕಿದ 14 ಮಿಲಿಯನ್ ಜನತೆಗೆ ಪುನರ್‌ವಸತಿ ಕಲ್ಪಿಸುವ ನಿಟ್ಟಿನಲ್ಲಿ,ವಿಶ್ವಬ್ಯಾಂಕ್ ಪಾಕಿಸ್ತಾನಕ್ಕೆ 900 ಮಿಲಿಯನ್ ಡಾಲರ್ ಸಾಲ ನೀಡುವ ಕೋರಿಕೆಗೆ ಸಮ್ಮತಿಸಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದಲ್ಲಿ ಅಡಳಿತರೂಢ ಸರಕಾರ,900 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವಂತೆ ವಿಶ್ವಬ್ಯಾಂಕ್‌ಗೆ ಮನವಿ ಸಲ್ಲಿಸಿತು. ಪಾಕಿಸ್ತಾನಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ ಸೂಚಿಸಿದೆ ಎಂದು ವಿಶ್ವಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಟರ್‌ನ್ಯಾಷನಲ್ ಡೆವೆಲೆಪ್‌ಮೆಂಟ್ ಅಸೋಸಿಯೇಶನ್ ನಿಧಿಯಿಂದ, ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಗಸ್ಟ್ 11ರಂದು ಪಾಕಿಸ್ತಾನದ ಸರಕಾರ, ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ಥರಿಗೆ ಪುನರ್‌ವಸತಿ ಕಲ್ಪಿಸಲು ಅಗತ್ಯವಾದ ಆರ್ಥಿಕ ನೆರವು ನೀಡುವಂತೆ, ವಿಶ್ವಬ್ಯಾಂಕ್ ಮತ್ತು ಏಷ್ಯನ್ ಡೆವೆಲೆಪ್‌ಮೆಂಟ್ ಬ್ಯಾಂಕ್(ಎಡಿಬಿ)ಗೆ ಕೋರಿತ್ತು.