ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ಕಮ್ಯೂನಿಕೇಶನ್ಸ್,ಜೂನ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ಶೇ.84.67ರಷ್ಟು ಕುಸಿತವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮುಂಬೈ ಶೇರುಪೇಟೆಯ ವಹಿವಾಟಿನಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ಸ್ ಶೇರುಗಳು ಶೇ.4.64ರಷ್ಟು ಕುಸಿತ ಕಂಡು,ಪ್ರತಿ ಶೇರು ದರ 160.30 ರೂಪಾಯಿಗಳಿಗೆ ತಲುಪಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯಲ್ಲಿ ಕೂಡಾ, ರಿಲಯನ್ಸ್ ಶೇರುಗಳು ಶೇ.4.99ರಷ್ಟು ಏರಿಕೆ ಕಂಡು, ಪ್ರತಿ ಶೇರುದರ 159.70 ರೂಪಾಯಿಗಳಿಗೆ ತಲುಪಿದೆ.
3ಜಿ ತರಂಗಾಂತರಗಳ ಹೆಚ್ಚುವರಿ ವೆಚ್ಚದ ಒತ್ತಡವನ್ನು ಟೆಲಿಕಾಂ ಕ್ಷೇತ್ರ ಎದುರಿಸುತ್ತಿದ್ದು, ಮೂರನೇ ತ್ರೈಮಾಸಿಕ ಫಲಿತಾಂಶಗಳು ಕೂಡಾ ನಿರಾಶೆ ಮೂಡಿಸುವಂತಾಗಿದೆ ಎಂದು ಆರ್‌ಕಾಂ ಗ್ಲೋಬಲ್ ಉಪಾಧ್ಯಕ್ಷ ರಾಜೇಶ್ ಜೈನ್ ಹೇಳಿದ್ದಾರೆ.
ಏತನ್ಮಧ್ಯೆ, ಮಧ್ಯಾಹ್ನದ ಅವಧಿಯ ವಹಿವಾಟಿನಲ್ಲಿ ಶೇರುಪೇಟೆ ಸೂಚ್ಯಂಕ 18,168.06 ಪಾಯಿಂಟ್‌ಗಳಿಗೆ ತಲುಪಿದೆ.
ಕಳೆದ ಶುಕ್ರವಾರದಂದು ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್, ಕ್ರೂಢೀಕೃತ ನಿವ್ವಳ ಲಾಭದಲ್ಲಿ ಶೇ.84.67ರಷ್ಟು ಕುಸಿತವಾಗಿ 250.89ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.