ಕಳೆದ ತಿಂಗಳ ಅವಧಿಯ ರಫ್ತು ವಹಿವಾಟಿನಲ್ಲಿ ಶೇ.13.2ರಷ್ಟು ಏರಿಕೆಯಾಗಿ,16.24 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.
ಜುಲೈ ತಿಂಗಳ ಅವಧಿಯ ಅಮುದು ವಹಿವಾಟಿನಲ್ಲಿ ಶೇ.34.3ರಷ್ಟು ಏರಿಕೆಯಾಗಿ, 29.17 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್-ಜುಲೈ ತಿಂಗಳ ಅವಧಿಯ ಸಾಗರೋತ್ತರ ವಹಿವಾಟಿನಲ್ಲಿ ಶೇ.30.1ರಷ್ಟು ಏರಿಕೆಯಾಗಿ 68.63 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಅಮುದು ವಹಿವಾಟಿನಲ್ಲಿ ಕೂಡಾ ಶೇ.33.3ರಷ್ಟು ಏರಿಕೆಯಾಗಿ 112 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಚರ್ಮೋದ್ಯಮ, ಎಲೆಕ್ಟ್ರಾನಿಕ್ ವಸ್ತುಗಳು, ಫೈಬರ್,ಜವಳಿ ಮತ್ತು ಟೀ ಕ್ಷೇತ್ರಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ಹೇಳಿದ್ದಾರೆ.