ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮರ್ಸಿಡೆಸ್ ಬೆಂಜ್‌ನ ನೂತನ ಇ-ಕ್ಲಾಸ್ ಮಾಡೆಲ್ ಬಿಡುಗಡೆ (Mercedes Benz | E-Class | Sedan, E-Class Cabriolet | Carmaker | German)
ಜರ್ಮನ್ ಮೂಲದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡೆಸ್ ಬೆಂಜ್, ನೂತನ ಮಾಡೆಲ್ ಇ-ಕ್ಲಾಸ್ ಸೆಡಾನ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು,64.5ಲಕ್ಷ ರೂಪಾಯಿಗಳ (ದೆಹಲಿ ಶೋರೂಂ ದರವನ್ನು ಹೊರತುಪಡಿಸಿ )ದರವನ್ನು ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ನೂತನ ಮಾಡೆಲ್ ಇ-ಕ್ಲಾಸ್ ಕ್ಯಾಬ್ರಿಯೊಲೆಟ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗುವುದರೊಂದಿಗೆ, ಇ-ಕ್ಲಾಸ್ ಆವೃತ್ತಿಯಲ್ಲಿ ಏಳನೇ ಮಾಡೆಲ್ ಕಾರು ಬಿಡುಗಡೆ ಮಾಡಿದಂತಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿರುವ ಇ-ಕ್ಲಾಸ್ ಸಲೂನ್ ಮತ್ತು ಇ-ಕ್ಲಾಸ್ ಕೌಪೆ ಸಾಲಿಗೆ, ನೂತನ ಮಾಡೆಲ್ ಇ-ಕ್ಲಾಸ್ ಕ್ಯಾಬ್ರಿಯೊಲೆಟ್ ಸೇರಿದಂತಾಗಿದೆ ಎಂದು ಮರ್ಸಿಡೆಸ್ ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಲ್‌ಫ್ರೈಡ್ ಆವುಲ್‌ಬುರ್ ತಿಳಿಸಿದ್ದಾರೆ.
ಪ್ರಸ್ತುತ ದೇಶದ ಮಾರುಕಟ್ಟೆಯಲ್ಲಿರುವ ಮರ್ಸಿಡೆಸ್ ಬೆಂಜ್‌ನ ಇ-ಕ್ಲಾಸ್ ಮಾಡೆಲ್ ಕಾರುಗಳ ದರಗಳು 42 ಲಕ್ಷ ರೂಪಾಯಿಗಳಿಂದ 50 ಲಕ್ಷ ರೂಪಾಯಿಗಳವರೆಗೆ ದರವನ್ನು ನಿಗದಿಪಡಿಸಲಾಗಿದೆ.
ನೂತನ ಮಾಡೆಲ್ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದರೊಂದಿಗೆ, ಭಾರತದ ಐಷಾರಾಮಿ ಕಾರುಗಳ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸುವ ಗುರಿಯನ್ನು ಹೊಂದಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.