ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ಲ್ಯಾಕ್ ಬೆರ್ರಿ ಅಧಿಕಾರಿಗಳೊಂದಿಗೆ ಸರಕಾರ ಚರ್ಚೆ:ರಾಜಾ (BlackBerry services | Smart phones | Security issue | RIM | Government)
ಬ್ಲ್ಯಾಕ್ ಬೆರ್ರಿ ಸ್ಮಾರ್ಟ್ ಫೋನ್‌ನ ಕೆಲ ಸಂದೇಶಗಳ ಸೇವೆಗಳ ತಡೆಹಿಡಿಯುವಿಕೆ ಹಾಗೂ ಮೇಲ್ವಿಚಾರಣೆ ಕುರಿತಂತೆ ಟೆಲಿಕಾಂ ಆಪರೇಟರ್‌ಗಳು ಹಾಗೂ ರಿಸರ್ಚ್ ಇನ್ ಮೋಶನ್ ಕಂಪೆನಿಯೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಕೇಂದ್ರದ ಟೆಲಿಕಾಂ ಸಚಿವ ಎ.ರಾಜಾ ಹೇಳಿದ್ದಾರೆ.
ನಿಗೂಢ ಲಿಪಿಕರಣ ವ್ಯವಸ್ಥೆಯಿಂದಾಗಿ ಬ್ಲ್ಯಾಕ್‌ಬೆರ್ರಿ ಸಂದೇಶಗಳನ್ನು ತಡೆಹಿಡಿಯುವುದು ಹಾಗೂ ಮೇಲ್ವಿಚಾರಣೆ ನಡೆಸುವುದು ಭದ್ರತಾ ಸಂಸ್ಥೆಗಳಿಗೆ ಸಾಧ್ಯವಾಗುವುದಿಲ್ಲ. ನಿಗೂಢ ಸಂಕೀರ್ಣವಾದ ಲಿಪಿಕರಣ ವ್ಯವಸ್ಥೆಯನ್ನು ಉಗ್ರರು ದೇಶವಿರೋಧಿ ಕೃತ್ಯಗಳಿಗಾಗಿ ಬಳಸುವ ಸಾಧ್ಯತೆಗಳಿವೆ ಎಂದು ಸಚಿವ ರಾಜಾ ಲೋಕಸಭೆಗೆ ಲಿಖಿತ ಮಾಹಿತಿ ನೀಡಿದ್ದಾರೆ.
ದೇಶದ ಭ್ರದ್ರತಾ ಸಂಸ್ಥೆಗಳು ಕೂಡಾ ಗೂಗಲ್‌ನ ಜಿ-ಮೇಲ್ ಮತ್ತು ಸ್ಕೈಪೆ ಟೆಲಿಫೋನ್ ಸೇವೆಗಳನ್ನು ಮೇಲ್ವಿಚಾರಣೆ ಕಷ್ಟಸಾಧ್ಯವೆಂದು ಹೇಳಿಕೆ ನೀಡಿವೆ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್‌ಬೆರ್ರಿ ಸಂದೇಶಗಳನ್ನು ಹಾಗೂ ಇ-ಮೇಲ್ ಸೇವೆಗಳ ಮೇಲ್ವಿಚಾರಣೆಗಾಗಿ, ರಿಸರ್ಚ್ ಇನ್ ಮೋಶನ್ ಸಂಸ್ಥೆ ತಾಂತ್ರಿಕ ಪರಿಹಾರವನ್ನು ಒದಗಿಸುವ ಭರವಸೆ ನೀಡಿದೆ.ಅಗಸ್ಟ್ 31ರೊಳಗೆ ಸಮಸ್ಯೆಯನ್ನು ಬಗೆಹರಿಸುವಂತೆ ಗಡುವು ನೀಡಲಾಗಿದೆ.
ಇಲ್ಲವಾದಲ್ಲಿ ಬ್ಲ್ಯಾಕ್ ಬೆರ್ರಿ ಸೇವೆಗಳಿಗೆ ನಿಷೇಧ ಹೇರುವುದಾಗಿ ಸರಕಾರ ಎಚ್ಚರಿಕೆ ನೀಡಿದೆ ಎಂದು ಸಚಿವ ಎ. ರಾಜಾ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.