ಮಾರುತಿಯಿಂದ ಅತ್ಯಾಧುನಿಕ ಎ-ಸ್ಟಾರ್ ಮಾಡೆಲ್ ಮಾರುಕಟ್ಟೆಗೆ
ನವದೆಹಲಿ, ಬುಧವಾರ, 18 ಆಗಸ್ಟ್ 2010( 12:53 IST )
ದೇಶದ ಕಾರು ತಯಾರಿಕೆ ಕಂಪೆನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಝುಕಿ, ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಎ.ಸ್ಟಾರ್ ಮಾಡೆಲ್ ಅತ್ಯಾಧುನಿಕ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಕಾರಿನ ದರವನ್ನು(ದೆಹಲಿ ಶೋರೂಂ ದರವನ್ನು ಹೊರತುಪಡಿಸಿ) 4,35,000 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ
ದೇಶದ ಕಾರು ಮಾರುಕಟ್ಟೆಯಲ್ಲಿ ಶೇ.50ರಷ್ಟು ಪಾಲನ್ನು ಹೊಂದಿರುವ ಮಾರುತಿ, ಪ್ರಸಕ್ತ ವರ್ಷದ ಅವಧಿಯಲ್ಲಿ ಇತರ ಕಾರು ತಯಾರಿಕೆ ಕಂಪೆನಿಗೊಳಿಂದಿಗಿನ ಸ್ಪರ್ಧಾತ್ಮಕತೆಯಿಂದಾಗಿ ಹಲವು ಮಾಡೆಲ್‌ಗಳ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತದೆ.
ಕಳೆದ ಅಗಸ್ಟ್ 13ರಂದು ಮಾರುತಿ ಸುಝುಕಿ, ಉತ್ತಮ ಮಾರುಕಟ್ಟೆಯನ್ನು ಹೊಂದಿರುವ ಅಲ್ಟೋ ಸೇರಿದಂತೆ ಸಿಎನ್‌ಜಿ ಆವೃತ್ತಿಯ ಐದು ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.ಏಗಸ್ಟ್ 4ರಂದು ಅಲ್ಟೋ-ಕೆ10 ಮಾದರಿಯ ಕಾರನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.