ದೇಶದ ಖ್ಯಾತ ಉದ್ಯಮಿಗಳಾದ ಅಂಬಾನಿ ಸಹೋದರರು, ಟಾಟಾ,ರುವೈಸ್ ಮತ್ತು ಜಿಂದಾಲ್, 157 ಖಾಸಗಿ ಜೆಟ್‌ಗಳ ಖರೀದಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳು ತಿಳಿಸಿವೆ.
ಉದ್ಯಮಿಗಳು ಬೇಡಿಕೆ ಸಲ್ಲಿಸಿದ ಖಾಸಗಿ ಜೆಟ್ ವಿಮಾನಗಳು ಮುಂದಿನ ವರ್ಷದಲ್ಲಿ ಭಾರತಕ್ಕೆ ಆಗಮಿಸಲಿವೆ. ಇದರಿಂದಾಗಿ ದೇಶದ ಕಾರ್ಪೋರೇಟ್ ಉದ್ಯಮಿಗಳು ಹೆಚ್ಚಿನ ಜೆಟ್ ವಿಮಾನಗಳನ್ನು ಹೊಂದಿದ ರಾಷ್ಟ್ರಗಳಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದಿದೆ. ಚೀನಾದಲ್ಲಿ ಅತಿ ಹೆಚ್ಚಿನ ಬಿಲಿಯನೇರ್‌ಗಳಿದ್ದರೂ ಖಾಸಗಿ ವಿಮಾನ ಸಂಖ್ಯೆ ಭಾರತಕ್ಕಿಂತ ಅರ್ಧದಷ್ಟು ಕಡಿಮೆಯಾಗಿದೆ.
ವಿಮಾನಗಳ ಬೇಡಿಕೆ ಸಲ್ಲಿಸಿದ ಉದ್ಯಮಿಗಳಲ್ಲಿ ಅಂಬಾನಿ ಸಹೋದರರು, ಟಾಟಾ, ಎಸ್ಸಾರ್ ಗ್ರೂಪ್, ಜಿಂದಾಲ್, ಟಿವಿಎಸ್,ಡಿಎಲ್‌ಎಫ್‌ನ ಕೆಪಿ ಸಿಂಗ್, ಗೌತಮ್ ಥಾಪರ್ ,ಸೈರಸ್ ಪೂನಾವಾಲಾ, ಜಿಎಂಆರ್ ಮತ್ತು ಜಿವಿಕೆ ಕಂಪೆನಿ,ಡಿಎಸ್.ಕನ್ಸಟ್ರಕ್ಷನ್, ಪುಂಜ್ ಲಾಯ್ಡ್ ಹಾಗೂ ಡೆಕ್ಕನ್ ಕ್ರಾನಿಕಲ್ ಮುಖ್ಯಸ್ಥರು ಸೇರ್ಪಡೆಯಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.