ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಬೇಕೇ? (MIOT Hospital Chennai | Allied Science | Course | Education)
Bookmark and Share Feedback Print
 
WD
ಸ್ವಾತಂತ್ರ್ಯಾವಧಿಯಲ್ಲಿ ಸರಾಸರಿ 26.7 ವರ್ಷಗಳಷ್ಟಿದ್ದ ಭಾರತೀಯರ ಜೀವಿತಾವಧಿಯು ಇಂದು 60 ವರ್ಷಕ್ಕೇರಿದೆ. ದೇಶದಲ್ಲಿ ಆರೋಗ್ಯ ರಕ್ಷಣಾ ಕ್ಷೇತ್ರದ ಪ್ರಗತಿಯನ್ನು ಇದು ಸೂಚಿಸುತ್ತಿದ್ದರೂ, ಪರಿಣತ ವೈದ್ಯಕೀಯ ತಂತ್ರಜ್ಞರ ಕೊರತೆ ಇನ್ನೂ ಇದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 40 ಸಾವಿರಕ್ಕೊಬ್ಬರಂತೆ ವೈದ್ಯರಿದ್ದರೆ, ನಮ್ಮಲ್ಲಿ ಕೇವಲ 4 ಲಕ್ಷಕ್ಕೊಬ್ಬರಂತೆ ವೈದ್ಯರಿದ್ದಾರೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಜಗತ್ತಿನಲ್ಲಿ ಬೇಡಿಕೆಗಳು ಸಾಕಷ್ಟಿದ್ದು, ವೈದ್ಯಕೀಯ ಲೋಕವನ್ನೇ ವೃತ್ತಿಯಾಗಿಸಿಕೊಳ್ಳಲು ಇಚ್ಛಿಸುವವರಿಗೆ ಕೈಗನ್ನಡಿಯಾಗಿ ರೂಪು ತಳೆದಿದೆ ಚೆನ್ನೈನಲ್ಲಿರುವ ಮಿಯೋಟ್ ಅಕಾಡೆಮಿ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಸಂಸ್ಥೆ.

ಬುಧವಾರ ಚಾಲನೆ ಪಡೆದ ಈ ಶಿಕ್ಷಣ ಸಂಸ್ಥೆಯು ತಮಿಳುನಾಡಿನ ಡಾ.ಎಂ.ಜಿ.ಆರ್. ವಿಶ್ವವಿದ್ಯಾಲಯದ ಅಧೀನದಲ್ಲಿದ್ದು, ವೈದ್ಯಕೀಯ ತಪಾಸಣೆ ಮತ್ತು ವೈದ್ಯಕೀಯ ಚಿಕಿತ್ಸಾ ವಿಭಾಗದಲ್ಲಿ ಸಾಕಷ್ಟು ತಾಂತ್ರಿಕ ಕೋರ್ಸುಗಳನ್ನು ಒದಗಿಸುತ್ತಿದೆ. ಇಂದು ವೈದ್ಯರಿಗೆ ರೋಗ ಪತ್ತೆಗೆ ಮತ್ತು ಚಿಕಿತ್ಸೆಗೆ ಅತ್ಯಂತ ಕ್ಷಿಪ್ರವಾಗಿ ನೆರವು ನೀಡಬಲ್ಲ ಹೊಸ ಹೊಸ ಅತ್ಯಾಧುನಿಕ ವೈದ್ಯಕೀಯ ಸಲಕರಣೆಗಳು ಬಂದಿವೆ. ಇವುಗಳ ನಿರ್ವಹಣೆಗೂ ಕುಶಲಕರ್ಮಿ ತಜ್ಞರು ಬೇಕಾಗಿದ್ದಾರೆ. ವೈದ್ಯರು ಕೂಡ ತ್ವರಿತ ರೋಗನಿರ್ಣಯಕ್ಕೆ ಈ ಸಲಕರಣೆಗಳ ಪರಿಣತರ ಮೇಲೆಯೇ ಅವಲಂಬಿಸಿರುವುದರಿಂದಾಗಿ, ಈ ಕ್ಷೇತ್ರದಲ್ಲಿ ಪರಿಣತರಿಗೆ ಸಾಕಷ್ಟು ಬೇಡಿಕೆಗಳಿವೆ.

ಈ ಕ್ಷೇತ್ರದ ನಿರ್ವಾತವನ್ನು ತುಂಬಲು, ಪ್ಯಾರಾ ಪ್ರೊಫೆಶನಲ್ ಕೋರ್ಸುಗಳನ್ನು ಮಿಯೋಟ್ ಆಸ್ಪತ್ರೆಯು ಒದಗಿಸುತ್ತಿದ್ದು, 12ನೇ ತರಗತಿ (ಪಿಯುಸಿ) ಉತ್ತೀರ್ಣತೆ ಹೊಂದಿದ ಯುವ ಸಮೂಹಕ್ಕೆ ತರಬೇತಿ ನೀಡಲು, ತಜ್ಞ ವೈದ್ಯರು ರೂಪಿಸಿದ ಕೋರ್ಸುಗಳೇ ಇಲ್ಲಿನ ಪಠ್ಯವಿಷಯ.

ಈ ಕೋರ್ಸುಗಳು 3 ವರ್ಷ ಅವಧಿಯದ್ದಾಗಿದ್ದು, ಮೊದಲ ವರ್ಷದಲ್ಲಿ ಮಾನವ ಶರೀರ ಶಾಸ್ತ್ರ ಹಾಗೂ ರೋಗಗಳಿಗೆ ಅಂಗಾಂಶಗಳು, ಅಂಗಗಳ ಪ್ರತಿಕ್ರಿಯೆ ಮುಂತಾದ ಮೂಲಭೂತ ಮಾಹಿತಿಗಳಿರುತ್ತವೆ. ಅಪರಾಹ್ನ ತರಗತಿಗಳಲ್ಲಿ ಪ್ರಯೋಗಾಲಯದಲ್ಲಿ ವಿಶಿಷ್ಟ ಪ್ರಯೋಗಗಳಿರುತ್ತವೆ. ಕೋರ್ಸು ಪೂರ್ಣಗೊಳಿಸಿದವರಿಗೆ ಎಂಜಿಆರ್ ವಿವಿಯಿಂದ ಬಿ.ಎಸ್‌ಸಿ ಪದವಿ (ಅಲೈಡ್ ಹೆಲ್ತ್ ಸೈನ್ಸಸ್ ಹೆಸರಿನಲ್ಲಿ) ನೀಡಲಾಗುತ್ತದೆ.

ಲಭ್ಯವಿರುವ ಕೋರ್ಸುಗಳಲ್ಲಿ ಕೆಲವು ಇಂತಿವೆ:
1. ಬಿ.ಎಸ್‌ಸಿ - ಆಕ್ಸಿಡೆಂಟ್ ಮತ್ತು ಎಮರ್ಜೆನ್ಸಿ ಕೇರ್ ಟೆಕ್ನಾಲಜಿ
2. ಬಿ.ಎಸ್‌ಸಿ - ಕಾರ್ಡಿಯಾಕ್ ಪಲ್ಮನರಿ ಕೇರ್ ಟೆಕ್ನಾಲಜಿ
3. ಬಿ.ಎಸ್‌ಸಿ - ಕ್ರಿಟಿಕಲ್ ಕೇರ್ ಟೆಕ್ನಾಲಜಿ
4. ಬಿ.ಎಸ್‌ಸಿ - ಆಪರೇಶನ್ ಥಿಯೇಟರ್ ಮತ್ತು ಅನೆಸ್ತೀಸಿಯಾ ಟೆಕ್ನಾಲಜಿ
5. ಬಿ.ಎಸ್‌ಸಿ - ಫಿಸಿಶಿಯನ್ ಅಸಿಸ್ಟೆಂಟ್
6. ಬಿ.ಎಸ್‌ಸಿ - ರೇಡಿಯಾಲಜಿ ಇಮೇಜಿಂಗ್ ಟೆಕ್ನಾಲಜಿ

ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಮಾಡಬೇಕೆಂಬ ಉತ್ಸುಕತೆಯಲ್ಲಿರುವವರಿಗೆ ಈ ಕೋರ್ಸುಗಳು ಸದವಕಾಶವನ್ನು ಒದಗಿಸುತ್ತವೆ. ಕೌಶಲ್ಯಯುತ ಸಹಾಯಕರ ಹುದ್ದೆಗಳಿಗೆ ಸಾಕಷ್ಟು ಬೇಡಿಕೆಗಳಿರುವುದರಿಂದ ಈ ಕೋರ್ಸುಗಳು ಖಂಡಿತವಾಗಿಯೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ. ಸಾಫ್ಟ್‌ವೇರ್ ಕ್ಷೇತ್ರಗಳತ್ತಲೇ ಹೆಚ್ಚು ಯುವಕರು ಆಕರ್ಷಿತರಾಗುತ್ತಿರುವುದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತ ವೈದ್ಯಕೀಯ ತಂತ್ರಜ್ಞರ ಕೊರತೆ ಎದ್ದುಕಾಣುತ್ತಿದೆ. ಈ ಕಾರಣಕ್ಕೆ ಮಿಯೋಟ್ ವೈದ್ಯಕೀಯ ಶಿಕ್ಷಣ ಸಂಸ್ಥೆ ಈ ಕೋರ್ಸುಗಳನ್ನು ಆರಂಭಿಸಿರುವುದಾಗಿ ಮಿಯೋಟ್ ಆಸ್ಪತ್ರೆ ಸಮೂಹ ಸಂಸ್ಥೆಯ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಪಿ.ವಿ.ಎ.ಮೋಹನ್ ದಾಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಿಯೋಟ್ ಆಸ್ಪತ್ರೆಯ ವಿಳಾಸ ಇಲ್ಲಿದೆ:
4/112, ಮೌಂಟ್ ಪೂನಮಲೀ ರೋಡ್, ಮಾನಪಾಕ್ಕಂ, ಚೆನ್ನೈ 600089
ಫೋನ್: 044-2249 2288
ಸಂಬಂಧಿತ ಮಾಹಿತಿ ಹುಡುಕಿ