ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯೋಜನಾ ಆಯೋಗದ ಕಾರ್ಯವೈಖರಿಯಲ್ಲಿ ಬದಲಾವಣೆ ಅಗತ್ಯ (Planning Commission | Road Transport | Ahluwalia | Kamal Nath)
Bookmark and Share Feedback Print
 
ಕೇಂದ್ರ ಯೋಜನಾ ಆಯೋಗ ಹಾಗೂ ಸಾರಿಗೆ ಸಚಿವಾಲಯ ಮಧ್ಯೆ ಬಿಕ್ಕಟ್ಟು ಉಲ್ಬಣಗೊಂಡಿದ್ದು,ಯೋಜನಾ ಆಯೋಗದ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಾರಿಗೆ ಖಾತೆ ಸಚಿವ ಕಮಲ್‌ನಾಥ್ ಕಿಡಿಕಾರಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ತನ್ನನ್ನು ತಾನು ಬದಲಿಸಿಕೊಂತೆ, ಕೇಂದ್ರ ಯೋಜನಾ ಆಯೋಗ ಕೂಡಾ ಕಾರ್ಯವೈಖರಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದು ನೆಟ್‌ವರ್ಕ್ 18 ಸಂಸ್ಥಾಪಕ ಹಾಗೂ ಸಂಪಾದಕರು ಬರೆದ ಪುಸ್ತಕವೊಂದನ್ನು ಬಿಡುಗಡೆಗೊಳಿಸಿ ಸಚಿವ ಕಮಲ್‌ನಾಥ್ ಹೇಳಿದ್ದಾರೆ.

ಕೇಂದ್ರದ ಯೋಜನಾ ಆಯೋಗ ಹಾಗೂ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ, ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದೆ.ಯೋಜನಾ ಆಯೋಗ ವಿಫಲ ಸಲಹೆಗಾರ ಸಂಸ್ಥೆ ಎಂದು ಟೀಕಿಸಿದ್ದರು.

ಸಚಿವ ಕಮಲ್‌ನಾಥ್ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಯೋಜನಾ ಆಯೋಗ ಉಪಾಧ್ಯಕ್ಷ ಆಹ್ಲುವಾಲಿಯಾ, ಕೇವಲ ರಸ್ತೆಯನ್ನು ನಿರ್ಮಿಸುವವರಿಂದ ಸರಕಾರವನ್ನು ನಡೆಸಲು ಸಾಧ್ಯವಿಲ್ಲ. ಅವರಿಗೆ ನೀತಿ ನಿಯಮಗಳ ಪಟ್ಟಿಯನ್ನು ನೀಡಬೇಕು ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ