ಸತ್ಯಂ ಕಂಪ್ಯೂಟರ್‌ನ ಬಹುಕೋಟಿ ಹಗರಣದ ರೂವಾರಿ ಬಿ.ರಾಮಲಿಂಗಾ ರಾಜುಗೆ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್, ಸಿಬಿಐ ಪರ ವಕೀಲ ಹರಿನ್.ಪಿ.ರಾವಲ್, ಅನಾರೋಗ್ಯದ ನೆಪವೊಡ್ಡಿ ಕೆಲ ತಿಂಗಳುಗಳಿಂದ ನ್ಯಾಯಾಲಯಕ್ಕೆ ಹಾಜರಾಗದಿರುವ ಆರೋಪ ರಾಜು ಅವರ ಆರೋಗ್ಯ ತಪಾಸಣೆಗೆ ವಿಶೇಷ ವೈದ್ಯರ ತಂಡವನ್ನು ರಚಿಸಲು ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆರೋಪಿ ರಾಜು ಅವರ ಆರೋಗ್ಯದ ಬಗ್ಗೆ ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್(ಎನ್‌ಐಎಂಎಸ್)ಸಲ್ಲಿಸಿದ ವರದಿಗಳು ಶಂಕಾಸ್ಪದವಾಗಿವೆ ಎಂದು ಸಿಬಿಐ ಅನಮಾನ ವ್ಯಕ್ತಪಡಿಸಿರುವುದಾಗಿ ರಾವಲ್ ಹೇಳಿದ್ದಾರೆ.
ಸತ್ಯ ಕಂಪ್ಯೂಟರ್‌ನ ಬಹುಕೋಟಿ ಹಗರಣದಲ್ಲಿ ಭಾಗಿಯಾದ ಸತ್ಯ ರಾಜು ಸಹೋದರ ಬಿ.ರಾಮಾರಾಜು ಮತ್ತು ಸತ್ಯಂನ ಮಾಜಿ ಮುಖ್ಯ ಆರ್ಥಿಕ ಅಧಿಕಾರಿ ವಡ್ಲಾಮನಿ ಶ್ರೀನಿವಾಸ್ ಅವರಿಗೆ ನ್ಯಾಯಾಲಯ ಕಳೆದ ಜುಲೈ 20 ರಂದು ಉಚ್ಚ ನ್ಯಾಯಾಲಯ ಜಾಮೀನು ನೀಡಿತ್ತು.
ಸತ್ಯಂ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾದ ರಾಮಲಿಂಗಾರಾಜು ಹೊರತುಪಡಿಸಿ, ಒಂಬತ್ತು ಮಂದಿ ಆರೋಪಿಗಳು ಈಗಾಗಲೇ ಜಾಮೀನು ಪಡೆದಿದ್ದಾರೆ.