ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಬ್ಬದ ಕೊಡುಗೆ:ಪಂಜಾಬ್‌ ಬ್ಯಾಂಕ್ ಗೃಹಸಾಲ ದರ ಇಳಿಕೆ (Pnb, Festive offer | Pnb | Home loan at 8.5 per cent)
Bookmark and Share Feedback Print
 
ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಗ್ರಾಹಕರಿಗೆ ಹಬ್ಬದ ಕೊಡುಗೆಯನ್ನು ನೀಡಲು ರಿಯಾಯಿತಿ ಗೃಹ ಸಾಲ ಬಡ್ಡಿ ದರವನ್ನು ಶೇ.8.5ಕ್ಕೆ ಇಳಿಕೆ ಮಾಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

50 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ, ಶೇ.8.5ರ ರಿಯಾಯಿತಿ ಬಡ್ಡಿ ದರ ಮೂರು ವರ್ಷಗಳವರೆಗೆ ಸ್ಥಿರವಾಗಿರಲಿದೆ.30 ಲಕ್ಷ ರೂಪಾಯಿಗಳವರೆಗಿನ ಸಾಲದ ಬಡ್ಡಿ ದರವನ್ನು ಗ್ರಾಹಕರ ಆಕರ್ಷಣೆಗಾಗಿ ಶೇ.9.25ಕ್ಕೆ ಇಳಿಕೆಗೊಳಿಸಿದೆ.

ಈ ಕೊಡುಗೆಯನ್ವಯ, 50 ಲಕ್ಷ ರೂಪಾಯಿಗಳವರೆಗಿನ ಗೃಹ ಸಾಲಕ್ಕೆ ರಿಯಾಯಿತಿಯನ್ನು ಘೋಷಿಸಲಾಗಿದ್ದು, ಮೂರು ವರ್ಷಗಳವರೆಗೆ ಶೇ.8.50ರಷ್ಟು ಸ್ಥಿರ ಬಡ್ಡಿದರವನ್ನು ನಿಗದಿಪಡಿಸಲಾಗಿದೆ ಎಂದು ಪಿಎನ್‌‌ಬಿ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಹಬ್ಬದ ರಿಯಾಯಿತಿ ಬಡ್ಡಿ ದರದ ಕೊಡುಗೆ, ಅಗಸ್ಟ್ 20ರಿಂದ ಡಿಸೆಂಬರ್ 31,2010ರವರೆಗೆ ನಿಗದಿಪಡಿಸಲಾಗಿದೆ. ದೇಶದ ಸರಕಾರಿ ಸ್ವಾಮದ್ಯ ಬ್ಯಾಂಕ್‌ಗಳಲ್ಲಿ ರಿಯಾಯತಿ ಘೋಷಿಸಿದ ಪಿಎನ್‌ಬಿ ಬ್ಯಾಂಕ್‌ ಮೊದಲನೆಯದಾಗಿದೆ

ಆಸಕ್ತಿಕ ಸಂಗತಿಯೆಂದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಸ್ತುತವಿರುವ ಗ್ರಾಹಕರಿಗಾಗಿ ಇತರ ಸಾಲಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಳಗೊಳಿಸಿದ್ದು,ಗೃಹಸಾಲದ ಬಡ್ಡಿ ದರದ ಮೇಲೆ ರಿಯಾಯಿತಿ ನೀಡಿದೆ.

ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಸಾಲ ಪಡೆದ ಮೊದಲ ವರ್ಷಕ್ಕೆ ಮಾತ್ರ ಶೇ.8ರಷ್ಟು ರಿಯಾಯಿತಿ ಬಡ್ಡಿ ದರವನ್ನು ಘೋಷಿಸಿದ್ದು, ಎರಡನೇ ವರ್ಷದ ಅವಧಿಯಲ್ಲಿ ಗ್ರಾಹಕರು ಹೆಚ್ಚಿನ ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ