ಹಣದುಬ್ಬರ ದರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್,ಎರಡನೇ ತ್ರೈಮಾಸಿಕ ಮಧ್ಯಭಾಗದಲ್ಲಿ ನಡೆಸಲಿರುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಅಧ್ಯಯನ ಸಂಸ್ಥೆ ಡುನ್ ಆಂಡ್ ಬ್ರಾಡ್‌ಸ್ಟ್ರೀಟ್ ವರದಿಯಲ್ಲಿ ತಿಳಿಸಿದೆ.
ವಾರ್ಷಿಕ ಹಣದುಬ್ಬರ ದರ ನಿರಂತರವಾಗಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಆರ್‌ಬಿಐ ತ್ರೈಮಾಸಿಕ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ರೆಪೋ ದರಗಳನ್ನು ಹೆಚ್ಚಿಸುವ ನಿರೀಕ್ಷೆಗಳಿವೆ ಎಂದು ಅಧ್ಯಯನ ಸಂಸ್ಥೆಯ ಆರ್ಥಿಕ ತಜ್ಞ ಅರುಣ್ ಸಿಂಗ್ ಹೇಳಿದ್ದಾರೆ.
ಕಳೆದ ಜುಲೈ ತಿಂಗಳ ಅವಧಿಯ ತ್ರೈಮಾಸಿಕ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳು ಹಾಗೂ ರಿವರ್ಸ್ ರೆಪೋ ದರಗಳಲ್ಲಿ 75 ಬೇಸಿಸ್ ಪಾಯಿಂಟ್‌ಗಳಲ್ಲಿ ಹೆಚ್ಚಳಗೊಳಿಸಿ ಆದೇಶ ಹೊರಡಿಸಿತ್ತು.
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್, ರೆಪೋ ದರ ಶೇ.5.75ರಷ್ಟಿದ್ದು, ರಿವರ್ಸ್ ರೆಪೋ ದರವನ್ನು ಶೇ.4.50ಕ್ಕೆ ನಿಗದಿಪಡಿಸಿದೆ.