ಮುಂಬರುವ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಸಕ್ಕರೆ ಇಳುವರಿಯನ್ನು ಪರಿಗಣಿಸಿ, ಸಕ್ಕರೆ ರಫ್ತು ವಹಿವಾಟು ನಿಷೇಧವನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಕೇಂದ್ರ ಕೃಷಿ ಮತ್ತು ಆಹಾರ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಕಳೆದ ಮೇ 2009ರ ಅವಧಿಯಲ್ಲಿ ಸಕ್ಕರೆ ರಫ್ತು ವಹಿವಾಟಿಗೆ ಕೇಂದ್ರ ಸರಕಾರ ನಿಷೇಧ ಹೇರಿದ್ದು, ಮುಂಬರುವ ಸೆಪ್ಟೆಂಬರ್ 2010ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ದೇಶದ ಸಕ್ಕರೆ ಉತ್ಪನ್ನದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದ್ದು, ನಂತರ ನಿಷೇಧ ಹಿಂದಕ್ಕೆ ಪಡೆಯುವ ಕುರಿತಂತೆ ಚರ್ಚಿಸಲಾಗುವುದು ಎಂದು ಸಚಿವ ಪವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಸ್ತುತ, ಸಕ್ಕರೆ ಚಿಲ್ಲರೆ ವಹಿವಾಟಿನಲ್ಲಿ ಶೇ.40ರಷ್ಟು ಇಳಿಕೆಯಾಗಿ ಪ್ರತಿ ಕೆಜಿ ದರ 30 ರೂಪಾಯಿಗಳಿಗೆ ಇಳಿಕೆಯಾಗಿದೆ. ಕಳೆದ ವರ್ಷದ ಜನೆವರಿ ಮಧ್ಯ ಭಾಗದಲ್ಲಿ ಪ್ರತಿ ಕೆಜಿ ಸಕ್ಕರೆಗೆ 48 ರೂಪಾಯಿಗಳಾಗಿತ್ತು