ಆಹಾರ ಸಂಗ್ರಹಗಾರದಲ್ಲಿ ಕೊಳೆಯುತ್ತಿರುವ ಆಹಾರ ಧಾನ್ಯಗಳನ್ನು ಬಡವರಿಗೆ ಉಚಿತವಾಗಿ ವಿತರಿಸಿ ಎನ್ನುವ ಸರ್ವೋಚ್ಚ ನ್ಯಾಯಾಲಯದ ಸಲಹೆಯನ್ನು ಪಾಲಿಸಲು ಸರಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ಆಹಾರ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.
ದೇಶದ ಸರ್ವೋಚ್ಚ ನ್ಯಾಯಾಲಯ,ಆಹಾರ ಸಂಗ್ರಹಗಾರದಲ್ಲಿ ಕೊಳೆಯುತ್ತಿರುವ ದವಸ ಧಾನ್ಯಗಳನ್ನು ಬಡವರಿಗೆ ಉಚಿತವಾಗಿ ವಿತರಿಸಿ ಅಥವಾ ಕಡಿಮೆ ದರದಲ್ಲಿ ಮಾರಾಟ ಮಾಡಿ ಎಂದು ಸಲಹೆ ನೀಡಿತ್ತು.
ಕೇಂದ್ರ ಸರಕಾರ ಬಡವರಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಲು ಸಾಧ್ಯವಿಲ್ಲ. ಆದರೆ ಕಡಿಮೆ ದರದಲ್ಲಿ ಬಡವರಿಗೆ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಂತ್ಯೋದಯ ಅನ್ನ ಯೋಜನೆಗಾಗಿ ಸರಕಾರ ಪ್ರತಿ ಕೆಜಿ ಗೋಧಿಯನ್ನು 16 ರೂಪಾಯಿಗಳಿಗೆ ಖರೀದಿಸಿ, ಬಡವರಿಗೆ ಪ್ರತಿ ಕೆಜಿ 2ರೂಪಾಯಿಗಳಂತೆ ನೀಡಲಾಗುತ್ತಿದೆ. ಇಪೆಕ್ಸ್ ನ್ಯಾಯಾಲಯದ ಸಲಹೆಯನ್ನು ಈಗಾಗಲೇ ಪಾಲಿಸಲಾಗುತ್ತಿದೆ ಎಂದರು.