ದೇಶದ ವಾಹನೊದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್, ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ 700 ಮಿಲಿಯನ್ ಡಾಲರ್‌ಙಣವನ್ನು ಸಂಗ್ರಹಿಸಲು ಯೋಜನೆಯನ್ನು ರೂಪಿಸಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಭಾರಿ ವಾಹನಗಳ ತಯಾರಿಕೆ, ಜಾಗ್ವಾರ್ ಮತ್ತು ಲಾಂಡ್ ರೋವರ್ ಹಾಗೂ ಜಗತ್ತಿನ ಕಡಿಮೆ ದರದ ಖ್ಯಾತಿಯ ನ್ಯಾನೋ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್, ಇದೀಗ ನೂತನ ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.
ಟಾಟಾ ಮೋಟಾರ್ಸ್ ವಕ್ತಾರ ಸುದ್ದಿಗಾರರೊಂದಿಗೆ ಮಾತನಾಡಿ, 47 ಬಿಲಿಯನ್ ರೂಪಾಯಿಗಳ ಸಂಗ್ರಹಕ್ಕಾಗಿ ಶೇರುದಾರರ ಅನುಮತಿಯನ್ನು ಪಡೆಯಲಾಗಿದೆ. ಆದರೆ, ಇಲ್ಲಿಯವರೆಗೆ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.
ಕಳೆದ 2008ರ ಅವಧಿಯಲ್ಲಿ ಲಂಡನ್ ಮೂಲದ ಜಾಗ್ವಾರ್ ಮತ್ತು ಲಾಂಡ್ ರೋವರ್ ಕಾರು ಕಂಪೆನಿ ಖರೀದಿಗಾಗಿ ಟಾಟಾ ಮೋಟಾರ್ಸ್ ಶೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.