ಹಬ್ಬದ ಸೀಜನ್ ಬೇಡಿಕೆಯ ಪೂರೈಕೆಗಾಗಿ ಆಭರಣ ವ್ಯಾಪಾರಿಗಳು, ಚಿನ್ನದ ಸಂಗ್ರಹಕಾರರಿಂದ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಪ್ರತಿ 10ಗ್ರಾಂ ಚಿನ್ನದ ದರದಲ್ಲಿ 50 ರೂಪಾಯಿಗಳಷ್ಟು ಏರಿಕೆಯಾಗಿ 18,950 ರೂಪಾಯಿಗಳಿಗೆ ತಲುಪಿದೆ.
ಏತನ್ಮಧ್ಯೆ, ಕೈಗಾರಿಕೋದ್ಯಮ ಕ್ಷೇತ್ರಗಳಿಂದ ಹಾಗೂ ನಾಣ್ಯ ತಯಾರಕರಿಂದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ ಬೆಳ್ಳಿಯ ದರ ಪ್ರತಿ ಕೆಜಿಗೆ 100 ರೂಪಾಯಿಗಳಷ್ಟು ಏರಿಕೆಯಾಗಿ 29,700 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟು ಹಾಗೂ ಹಬ್ಬದ ಸೀಜನ್ ಹಿನ್ನೆಲೆಯಲ್ಲಿ, ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ, ಚಿನ್ನದ ದರ ಪ್ರತಿ ಔನ್ಸ್‌ಗೆ ಶೇ.0.2ರಷ್ಟು ಏರಿಕೆಯಾಗಿ 1,231.53 ಡಾಲರ್‌ಗಳಿಗೆ ತಲುಪಿದೆ.
ಏತನ್ಮಧ್ಯೆ, ಬೆಳ್ಳಿಯ (100 ನಾಣ್ಯಗಳು) ದರ ಇಂದಿನ ವಹಿವಾಟಿನಲ್ಲಿ ಯಾವುದೇ ಬದಲಾವಣೆಯಾಗದೆ, ಪ್ರತಿ ಕೆಜಿಗೆ 34,500 ರೂಪಾಯಿಗಳಿಗೆ ಸ್ಥಿರವಾಗಿದೆ.