ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಾರ್ಖಂಡ್: 1,479 ಕೋಟಿ ರೂ ಯೋಜನೆಗೆ ಒಪ್ಪಂದ (NHDP | Govt | Jharkhand | CCI | Project)
Bookmark and Share Feedback Print
 
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎನ್‌ಎಚ್‌ಡಿಪಿ)ಅಡಿಯಲ್ಲಿ, ಜಾರ್ಖಂಡ್‌ ರಾಜ್ಯಕ್ಕೆ 1,479 ಕೋಟಿ ರೂಪಾಯಿ ರಸ್ತೆ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮೂಲಸೌಕರ್ಯ ಯೋಜನೆಯ ಸಂಪುಟ ಸಮಿತಿ(ಸಿಸಿಐ) ರಾಂಚಿ-ರರ್‌ಗಾಂವ್-ಜೆಮ್‌ಷೆಡ್‌ಪುರ್‌ನ ರಾಷ್ಟ್ರೀಯ ಹೆದ್ದಾರಿ 33ರಲ್ಲಿ ನಾಲ್ಕು ಲೇನ್‌ಗಳುಳ್ಳ ರಸ್ತೆ ನಿರ್ಮಾಣಕ್ಕಾಗಿ ಆರ್ಥಿಕ ನೆರವು ನೀಡಲಾಗಿದೆ ಎಂದು ಎನ್‌ಎಚ್‌ಡಿಪಿ ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ನಿರ್ಮಾಣದ ಅವಧಿಯನ್ನು 15 ವರ್ಷಗಳಿಗೆ ನಿಗದಿಪಡಿಸಲಾಗಿದ್ದು, ಭೂಸ್ವಾದೀನಕ್ಕಾಗಿ ಸರಕಾರ 55.84 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಎನ್‌ಎಚ್‌ಡಿಪಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ನಾಲ್ಕು ಲೇನ್‌ಗಳುಳ್ಳ ರಸ್ತೆ ನಿರ್ಮಾಣದಿಂದಾಗಿ, ರಾಜಧಾನಿ ರಾಂಚಿಯಿಂದ ಔದ್ಯೋಗಿಕ ನಗರವಾದ ಜೆಮ್‌ಷೆಡ್‌ಪುರ್‌ಗೆ ಪ್ರಯಾಣಿಸುವ ವೆಚ್ಚ ಹಾಗೂ ಸಮಯದಲ್ಲಿ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ