ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಹರಿವಿನ ಪ್ರಮಾಣ ಕುರಿತಂತೆ, ಭಾರತೀಯ ರಿಸರ್ವ್ ಬ್ಯಾಂಕ್ ಸೂಕ್ಷ್ಮವಾಗಿ ಗಮನಹರಿಸುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ನಗದು ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿ ಹೇಳಿದ್ದಾರೆ.
ಆರ್ಥಿಕ ನೀತಿ ಮೇಲ್ವಿಚಾರಕ ವಿಙಾಗದ ಉಸ್ತುವಾರಿ ಸಲಹೆಗಾರರಾದ ಜನಕ್ ರಾಜ್, ಆರ್ಥಿಕ ವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಟೆಲಿಕಾಂ ಕಂಪೆನಿಗಳ 3ಜಿ ತರಂಗಾಂತರ ಶುಲ್ಕ ಪಾವತಿ ಹಾಗೂ ಮುಂಗಡ ತೆರಿಗೆ ಪಾವತಿಯಿಂದಾಗಿ 1.35 ಟ್ರಿಲಿಯನ್ ರೂಪಾಯಿಗಳಷ್ಟು ಹೊರಹರಿವು ಹೆಚ್ಚಳವಾಗಿದ್ದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದು ಹರಿವಿನ ಪ್ರಮಾಣದ ಚೇತರಿಕೆಗೆ ವಿಳಂಬವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಬ್ಯಾಂಕ್‌ಗಳು ಹೆಚ್ಚಿನ ನಗದು ಹರಿವಿನ ಪ್ರಮಾಣವನ್ನು ಹೊಂದಿದ್ದವು.ಆದರೆ ಇತ್ತೀಚೆಗೆ ಬ್ಯಾಂಕ್‌ಗಳು ನಗದ ಹರಿವಿನ ಕೊರತೆಯನ್ನು ಎದುರಿಸುತ್ತಿರುವುದರಿಂದ, ಆರ್‌ಬಿಐನಿಂದ ಆರ್ಥಿಕ ನೆರವು ಪಡೆಯುತ್ತಿವೆ ಎಂದು ಆರ್‌ಬಿಐನ ಆರ್ಥಿಕ ನೀತಿ ಮೇಲ್ವಿಚಾರಕ ವಿಙಾಗದ ಉಸ್ತುವಾರಿ ಸಲಹೆಗಾರರಾದ ಜನಕ್ ರಾಜ್ ತಿಳಿಸಿದ್ದಾರೆ.