ಮಾವೋವಾದಿಗಳ ದಾಳಿಯಿಂದಾಗಿ ರೈಲು ಸಂಚಾರ ಅಸ್ತವ್ಯಸ್ಥವಾಗಿ, ರೈಲ್ವೆ ಇಲಾಖೆ 1ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ರೈಲ್ವೆ ಖಾತೆ ಸಚಿವೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಾವೋವಾದಿಗಳ ಬಂದ್ ಕರೆಯಿಂದಾಗಿ, ಪ್ರಸಕ್ತ ವರ್ಷದ ಅವಧಿಯಲ್ಲಿ 416 ರೈಲುಗಳನ್ನು ರದ್ದುಪಡಿಸಲಾಗಿದೆ. ಮಾವೋವಾದಿಗಳ ದಾಳಿಯನ್ನು ನಿಯಂತ್ರಿಸುವುದು ಸೂಕ್ಷ್ಮ ಸಂಗತಿಯಾಗಿದೆ. ಮಾವೋವಾದಿಗಳು ರೈಲುಗಳ ಮೇಲೆ ನಡೆಸುವ ದಾಳಿಯನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ.
ಜ್ಞಾನೇಶ್ವರಿ ರೈಲು ದುರಂತದಲ್ಲಿ ಭಾಗಿಯಾದ ಮಾವೋವಾದಿಗಳು ಲಾಲ್‌ಘರ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎನ್ನುವ ವಿರೋಧ ಪಕ್ಷಗಳ ಹೇಳಿಕೆಗೆ ಸಚಿವೆ ಮಮತಾ ಬ್ಯಾನರ್ಜಿ ಉತ್ತರಿಸಲು ನಿರಾಕರಿಸಿದರು.
2009-10ರ ಅವಧಿಯಲ್ಲಿ ಒಟ್ಟು 100 ರೈಲು ಅಪಘಾತಗಳು ಸಂಭವಿಸ್ದ್ದು, ಇಲಾಖೆ 64 ಉದ್ಯೋಗಿಗಳು ಸಾವನ್ನಪ್ಪಿದ್ದು ಬಾಂಬ್ ದಾಳಿಯಿಂದಾಗಿ ಇಲಾಖೆಗೆ 54 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.