ಜಾಗತಿಕ ಮಾರುಕಟ್ಟೆಗಳ ಸ್ಥಿರ ವಹಿವಾಟಿನ ಮಧ್ಯೆಯು ಹಬ್ಬದ ಸೀಜನ್ ಹಿನ್ನೆಲೆಯಲ್ಲಿ, ಆಭರಣಕಾರರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಚಿನ್ನದ ದರ ಪ್ರತಿ 10ಗ್ರಾಂಗೆ 35 ರೂಪಾಯಿಗಳ ಏರಿಕೆಯಾಗಿ 19,000 ರೂಪಾಯಿಗಳಿಗೆ ತಲುಪಿದೆ.
ಸತತ ಒಂಬತ್ತು ದಿನಗಳ ಅವಧಿಯ ವಹಿವಾಟಿನಲ್ಲಿ ನಿರಂತರ ಏರಿಕೆ ಕಂಡಿರುವ ಚಿನ್ನದ ದರ,ಇಂದಿನ ವಹಿವಾಟಿನಲ್ಲಿ ಪ್ರತಿ 10ಗ್ರಾಂಗೆ 18,985 ರೂಪಾಯಿಗೆ ತಲುಪಿದೆ.
ಹೂಡಿಕೆದಾರರು ಹಾಗೂ ಆಭರಣ ವ್ಯಾಪಾರಿಗಳು ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದೆ. ಸಾಗರೋತ್ತರ ಮಾರುಕಟ್ಟೆಗಳ ಚೇತರಿಕೆಯಿಂದಾಗಿ ಕೂಡಾ ಚಿನ್ನದ ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಯ ಚಿನ್ನದ ದರ ಶೇ.32ರಷ್ಟು ಏರಿಕೆಯಾಗಿ, ಪ್ರತಿ ಔನ್ಸ್‌ಗೆ 1,232.50 ಡಾಲರ್‌ಗಳಿಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 100 ರೂಪಾಯಿಗಳಷ್ಟು ಏರಿಕೆಯಾಗಿ 29,600 ರೂಪಾಯಿಗಳಿಗೆ ತಲುಪಿದೆ.ಬೆಳ್ಳಿಯ ನಾಣ್ಯಗಳ ದರದಲ್ಲಿ (100 ನಾಣ್ಯಗಳು)34,500 ರೂಪಾಯಿಗಳಿಗೆ ತಲುಪಿದೆ.