ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಇಂಡಿಯಾ, ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾದ ಕೆ-ಸೀರಿಸ್‌ನ 5 ಲಕ್ಷ ಇಂಜಿನ್‌ಗಳ ಮಾರಾಟದ ಗುರಿಯನ್ನು ತಲುಪಿದೆ.
ಅಕ್ಟೋಬರ್ 2008ರಲ್ಲಿ ಕೆ-ಸೀರಿಸ್ ಇಂಜಿನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿತ್ತು. ಕೆ-ಸೀರಿಸ್ ಇಂಜಿನ್‌ಗಳು, ಅಲ್ಟೋ-ಕೆ10, ವಾಗನಾರ್, ಸ್ವಿಫ್ಟ್, ರಿಟ್ಝ್, ಎಸ್ಟಿಲೊ, ಸ್ವಿಫ್ಟ್ ಡಿಜೈರ್ ಮತ್ತು ಎ-ಸ್ಟಾರ್ ಏಳು ಮಾಡೆಲ್‌ಗಳಲ್ಲಿ ಲಭ್ಯವಿದೆ
ತಂತ್ರಜ್ಞಾನದಲ್ಲಿ ಮಹತ್ತರ ಬದಲಾವಣೆಗಳನ್ನು ಹೊಂದಿರುವ ಕೆ-ಸೀರಿಸ್ ಇಂಜಿನ್ ಮಾರುಕಟ್ಟೆಗೆ ಪರಿಚಯಿಸಿರುವುದು ಮಾರುತಿ ಸುಝುಕಿ ಕಂಪೆನಿಯ ಬದ್ಧತೆಯನ್ನು ತೋರಿಸುತ್ತದೆ. ಕಡಿಮೆ ಅವಧಿಯಲ್ಲಿ ಕೆ-ಸೀರಿಸ್ ಇಂಜಿನ್‌ಗಳನ್ನು ವಾಹನೋದ್ಯಮ ಮಾರುಕಟ್ಟೆಯಲ್ಲಿ ಪ್ರಮುಖ ವಾಗಿಸುವಲ್ಲಿ ಕಂಪೆನಿ ಮಹತ್ತರ ಪಾತ್ರವಹಿಸಿದೆ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಂಝೋ ನಕಾನಿಶಿ ತಿಳಿಸಿದ್ದಾರೆ.
ಕಂಪೆನಿ, ವಾರ್ಷಿಕವಾಗಿ 5 ಲಕ್ಷ ಕೆ-ಸೀರಿಸ್ ಇಂಜಿನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮುಂಬರುವ 2012ರ ವೇಳೆಗೆ ಒಟ್ಟು 7 ಲಕ್ಷ ಇಂಜಿನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಮಾರುತಿ ಸುಝುಕಿ ಕಂಪೆನಿ, 998ಸಿಸಿ ಮತ್ತು 1.2 ಲೀಟರ್‌ಗಳ ಎರಡು ವಿಧದ ಕೆ-ಸೀರಿಸ್ ಇಂಜಿನ್‌ಗಳನ್ನು ಉತ್ಪಾದಿಸುತ್ತಿದ್ದು, 998ಸಿಸಿ ಮೂರು ಸಿಲೆಂಡರ್ ಕೆ-ಸೀರಿಸ್‌ನ ಕೆ10 ಇಂಜಿನ್‌ಗಳನ್ನು ಅಲ್ಟೋ-ಕೆ10, ಎಸ್ಟಾರ್, ಎಸ್ಟಿಲೊ ಮತ್ತು ನೂತನವಾಗಿ ಬಿಡುಗಡೆ ಮಾಡಲಾದ ವಾಗನ್ ಆರ್ ಮಾಡೆಲ್‌ಗಳ ಕಾರುಗಳಲ್ಲಿ ಅಳವಡಿಸಲಾಗಿದೆ.
ಮತ್ತೊಂದೆಡೆ, ರಿಟ್ಝ್, ಸ್ವಿಫ್ಟ್, ಸ್ವಿಫ್ಟ್ ಡಿಜೈರ್ ಕಾರುಗಳಲ್ಲಿ 1.2 ಲೀಟರ್‌ನ ನಾಲ್ಕು ಸಿಲೆಂಡರ್ ಕೆ12ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ ಎಂದು ಮಾರುತಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಿಝೋ,ನಕಾಶಿನಿ ತಿಳಿಸಿದ್ದಾರೆ.