ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಡ್ಡಿ ದರ ಏರಿಕೆಯಿಂದ ಕೈಗಾರಿಕೋದ್ಯಮ ಕುಸಿತ:ಮೀನಾ (Interest rates | Rising | Industry | FinMin | Lok Sabha)
Bookmark and Share Feedback Print
 
ದೇಶದ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಘೋಷಿಸಿದ ಬಡ್ಡಿದರ ಏರಿಕೆಯಿಂದಾಗಿ,ಕೈಗಾರಿಕೋದ್ಯಮದ ಮೇಲೆ ಋಣಾತ್ಮಕ ಪ್ರಭಾವ ಬೀರಲಿದೆ ಎಂದು ಕೇಂದ್ರ ಸರಕಾರ ಹೇಳಿಕೆ ನೀಡಿದೆ.

ಬ್ಯಾಂಕ್‌ಗಳ ಬಡ್ಡಿ ದರಗಳ ಏರಿಕೆಯಿಂದಾಗಿ, ಕೈಗಾರಿಕೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳು ಚೇತರಿಕೆಗೆ ಅಡ್ಡಿಯಾಗಲಿವೆ ಎಂದು ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವ ನಮೋ ನರೈನ್ ಮೀನಾ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕಳೆದ ಜನೆವರಿ 2010ರ ನಂತರ, ಭಾರತೀಯ ರಿಸರ್ವ್ ಬ್ಯಾಂಕ್, ಸಿಆರ್‌ಆರ್ ದರಗಳಲ್ಲಿ ಶೇ.1ರಿಂದ ಶೇ.6ರಷ್ಟು ಏರಿಕೆಗೊಳಿಸಿದೆ. ರೆಪೋ ದರಗಳಲ್ಲಿ 100 ಬೇಸಿಸ್ ಪಾಯಿಂಟ್‌ಗಳನ್ನು ಏರಿಕೆಗೊಳಿಸಿದ್ದು, ರಿವರ್ಸ್ ರೆಪೋ ದರಗಳಲ್ಲಿ 125 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.

ನಿರಂತರ ಏರಿಕೆ ಕಾಣುತ್ತಿರುವ ಹಣದುಬ್ಬರ ದರ ಏರಿಕೆ ನಿಯಂತ್ರಣಕ್ಕಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಅಭಿವೃದ್ಧಿಗೆ ಅಡ್ಡಿಯಾಗದಂತೆ ರೆಪೋ ದರಗಳಲ್ಲಿ ಏರಿಕೆ ಮಾಡುತ್ತಿದೆ ಎಂದು ಸಚ ನಮೋ ನರೈನ್ ಮೀನಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ