ಸ್ಥಿರ ದೂರವಾಣಿಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಖ್ಯೆಗಳ ಕೊರತೆ ಎದುರಾಗುವ ಸಾಧ್ಯತೆಗಳಿರುವುದರಿಂದ,ಸ್ಥಿರ ದೂರವಾಣಿಗಳ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗಳಂತೆ 10 ಡಿಜಿಟ್ ಸಂಖ್ಯೆಗಳನ್ನು ಹೊಂದುವುದು ಸೂಕ್ತ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಶಿಫಾರಸು ಮಾಡಿದೆ.
ಮುಂದಿನ ವರ್ಷದ ಡಿಸೆಂಬರ್ ತಿಂಗಳಿನಿಂದ ಸ್ಥಿರ ದೂರವಾಣಿಗಳ ಸಂಖ್ಯೆಯನ್ನು 10 ಡಿಜಿಟ್‌ಗಳಿಗೆ ಬದಲಾಯಿಸಲಾಗುವುದು ಎಂದು ಟ್ರಾಯ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಮೊಬೈಲ್ ಗ್ರಾಹಕ ಸಂಖ್ಯೆಗಳು ಪ್ರಸ್ತುತ 10 ಡಿಜಿಟ್ ಸಂಖ್ಯೆಗಳಾಗಿದ್ದು, ಮುಂಬರುವ ದಿನಗಳಲ್ಲಿ 11 ಸಂಖ್ಯೆಗಳಿಗೆ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸ್ಥಿರ ದೂರವಾಣಿ ಮತ್ತು ಮೊಬೈಲ್ ಫೋನ್‌ಗಳ ಸಂಖ್ಯೆಗಳು 10 ಡಿಜಿಟ್ ಸಂಖ್ಯೆಗಳನ್ನು ಹೊಂದಲಿವೆ.ಇದರಿಂದಾಗಿ ಮುಂದಿನ 30-40 ವರ್ಷಗಳ ಅವಧಿಯಲ್ಲಿ ಸಂಖ್ಯೆಗಳ ವಿಸ್ತರಣೆ ಹಾಗೂ ನೂತನ ಸೇವೆಗಳ ಜಾರಿಯಲ್ಲಿ ಯಾವುದೇ ರೀತಿಯ ತೊಂದರೆಯಾಗದು ಎಂದು ಟ್ರಾಯ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಿರ ದೂರವಾಣಿಗಳಿಗೆ 10 ಡಿಜಿಟ್ ಸಂಖ್ಯೆಗಳನ್ನು ವಿಸ್ತರಿಸುವ ಯೋಜನೆ ಜಾರಿಯಲ್ಲಿದ್ದು, ಸೆಪ್ಟೆಂಬರ್ 30, 2011ಕ್ಕೆ ಸಂಪೂರ್ಣವಾಗಲಿದೆ.ಡಿಸೆಂಬರ್ 31,2011ರ ಅವಧಿಯಲ್ಲಿ ಸ್ಥಿರ ದೂರವಾಣಿಗಳ ಗ್ರಾಹಕರಿಗೆ 10ಡಿಜಿಟ್ ಸಂಖ್ಯೆಗಳನ್ನು ಒದಗಿಸಲಾಗುವುದು ಎಂದು ಟ್ರಾ ಮೂಲಗಳು ತಿಳಿಸಿವೆ.