ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಸೇವೆ ಆರಂಭಕ್ಕೆ ಮೂಲಸೌಕರ್ಯಗಳು ಸಿದ್ಧ:ಏರ್‌ಟೆಲ್ (Bharti Airtel | Reliance Communications | 3G infra | Government | Spectrum)
Bookmark and Share Feedback Print
 
3ಜಿ ತರಂಗಾಂತರ ಸೇವೆಗಳಿಗೆ ಅಗತ್ಯವಾದ ಮೂಲಸೌಕರ್ಯಗಳೊಂದಿಗೆ ಸಿದ್ಧವಾಗಿದ್ದು, ಸರಕಾರದ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ದೇಶದ ಪ್ರಮುಖ ಖಾಸಗಿ ಟೆಲಿಕಾಂ ಕಂಪೆನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಕಮ್ಯೂನಿಕೇಶನ್ಸ್‌ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿವೆ.

ಕೇಂದ್ರ ಸರಕಾರ ಸೆಪ್ಟೆಂಬರ್ ವೇಳೆಗೆ 3ಜಿ ತರಂಗಾಂತರಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿದ್ದು, 3ಜಿ ತರಂಗಾಂತರಗಳ ಮಾರಾಟದಿಂದ 1.06 ಲಕ್ಷ ಕೋಟಿ ರೂಪಾಯಿ ಆದಾಯವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

3ಜಿ ಸೇವೆಗಳನ್ನು ಒದಗಿಸಲು ನಮ್ಮ ನೆಟ್‌ವರ್ಕ್ ಸಿದ್ಧವಾಗಿದೆ. ಕೇವಲ ರೇಡಿಯೋ ನೆಟ್‌ವರ್ಕ್ ಮಾತ್ರ ಸಿದ್ಧವಾಗುವಲ್ಲಿ ವಿಳಂಬವಾಗುತ್ತಿದೆ ಎಂದು ಏರ್‌ಟೆಲ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ವರ್ಷಾಂತ್ಯಕ್ಕೆ 3ಜಿ ಸೇವೆಗಳಿಗೆ ಸರಕಾರ ಅನುಮತಿ ನೀಡುವ ಆಶಾಭಾವನೆಯಿದೆ ಎಂದು ಭಾರ್ತಿ ಏರ್‌ಟೆಲ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಕಪೂರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬ್ಲ್ಯಾಕ್‌ಬೆರ್ರಿ ಸೇವೆಗಳ ವಿವಾದ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಪೂರ್, ಸರಕಾರ ಬ್ಲ್ಯಾಕ್ ಬೆರ್ರಿ ನಿಯಮಗಳನ್ನು ಘೋಷಿಸಿದ ನಂತರ ಸೇವೆಗಳನ್ನು ನೀಡಲು ಸಂಸ್ಥೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ