ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜವಳಿ ರಫ್ತು ಅನುಮತಿಯಿಂದ ಉದ್ಯಮಕ್ಕೆ ಧಕ್ಕೆ:ಎನ್‌ಟಿಎಂಎ (NITMA | Cotton exports | Textile industry | Business | Government | Natural fibre)
Bookmark and Share Feedback Print
 
ಮುಂಬರುವ ಅಕ್ಟೋಬರ್ 1ರಿಂದ ಜವಳಿ ರಫ್ತಿಗೆ ಅವಕಾಶ ನೀಡುವುದರಿಂದ, ದೇಶದ ಜವಳಿ ಉದ್ಯಮದ ಮೇಲೆ ನಕಾರಾತ್ಮಕ ಪ್ರಭಾವ ಬೀರಲಿದ್ದು, ಜವಳಿ ಉತ್ಪನ್ನಗಳ ದರಗಳಲ್ಲಿ ಕೂಡಾ ಏರಿಕೆಯಾಗಲಿದೆ ಎಂದು ಜವಳಿ ಉದ್ಯಮ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿವೆ.

ಜವಳಿ ರಫ್ತಿಗೆ ಅನುಮತಿ ನೀಡುವುದರಿಂದ ಸಮಸ್ಯೆಗಳು ಉಲ್ಬಣವಾಗಲಿವೆ. ದೇಶದಲ್ಲಿರುವ ಅಮೂಲ್ಯ ಕಚ್ಚಾವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡುವುದರಿಂದ, ದೇಶಿಯ ಜವಳಿ ಉದ್ಯಮಕ್ಕೆ ಭಾರಿ ಪ್ರಮಾಣದ ಹಾನಿಯಾಗಲಿದೆ ಎಂದು ನಾರ್ದನ್ ಇಂಡಿಯಾ ಟೆಕ್ಸ್‌ಟೈಲ್ ಮಿಲ್ಸ್ ಅಸೋಸಿಯೇಶನ್ ಅಧ್ಯಕ್ಷ ಆಶೀಶ್ ಬಾಗ್‌ರೊಡಿಯಾ ತಿಳಿಸಿದ್ದಾರೆ.

ಜವಳಿ ರಫ್ತಿಗೆ ಕೇಂದ್ರ ಸರಕಾರ ಅನುಮತಿ ನೀಡುವುದರಿಂದ, ಜವಳಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯೋಗಿಗಳ ಉದ್ಯೋಗಕ್ಕೆ ಸಂಚಕಾರ ಬರುವುದಲ್ಲದೇ,ನಿರುದ್ಯೋಗ ಸಮಸ್ಯೆ ಕಾಡಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ಅಗಸ್ಟ್ 17 ರಂದು ಜವಳಿ ರಫ್ತಿಗೆ ಅಕ್ಟೋಬರ್ 1ರಿಂದ ಅನುಮತಿ ನೀಡಲಾಗುವುದು ಎಂದು ಘೋಷಿಸಿರುವುದು ಜವಳಿ ಉದ್ಯಮ ತಲ್ಲಣಿಸುವಂತೆ ಮಾಡಿದೆ ಎಂದು ಉದ್ಯಮಿಗಳು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ