ಜೆಕ್ ಗಣರಾಜ್ಯದ ಕಾರು ತಯಾರಿಕೆ ಸಂಸ್ಥೆ ಸ್ಕೋಡಾ, ಮುಂಬರುವ 2012ರ ಆರಂಭದಲ್ಲಿ ಸಣ್ಣ ಮಾಡೆಲ್ ಕಾರು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, 3-5 ಲಕ್ಷ ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ವೊಕ್ಸ್‌ವಾಗೆನ್ ಗ್ರೂಪ್ ಆಧೀನ ಸಂಸ್ಥೆಯಾದ ಸ್ಕೋಡಾ, ಸ್ಪೋರ್ಟ್ಸ್ ವಾಹನ 'ಯೆಟಿ' ಮಾಡೆಲ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ಅದರಂತೆ 2012ರ ಅವಧಿಯಲ್ಲಿ ಸಣ್ಣ ಮಾಡೆಲ್ ಕಾರು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನೂತನ ಮಾಡೆಲ್ ಕಾರು ತಯಾರಿಕೆಯ ಹಂತದಲ್ಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಲಾಗುತ್ತಿದೆ ಸ್ಕೋಡಾ ಅಟೋ ಇಂಡಿಯಾ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಥಾಮಸ್ ಕುಹ್ಲೆ ಸುದ್ದಿಗಾರರಿಗೆ ತಿಳಿಸಿದ್ದಾರೆ