ನಿಮಗೆ ಗೊತ್ತೆ? ವಾರ್ಷಿಕವಾಗಿ 20 ಮಿಲಿಯನ್ ಓರಿಜಿನಲ್ ಡಿವಿಡಿಗಳು ಮಾರಾಟವಾದರೆ, ಸುಮಾರು 600 ಪೈರಸಿ ಡಿವಿಡಿಗಳು ಮಾರಾಟವಾಗುತ್ತಿರುವುದರಿಂದ ಭಾರತದ ಚಿತ್ರದ್ಯೋಮ ವಾರ್ಷಿಕವಾಗಿ 1ಬಿಲಿಯನ್ ಡಾಲರ್ ನಿವ್ವಳ ನಷ್ಟ ಅನುಭವಿಸುತ್ತದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಭಾರತದ ಚಿತ್ರೋದ್ಯಮ ವಾರ್ಷಿಕವಾಗಿ 2 ಬಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ. ಹಾಲಿವುಡ್ ಚಿತ್ರ 'ಅವತಾರ್' ಕೇವಲ ಒಂದು ವರ್ಷದ ಅವಧಿಯಲ್ಲಿ 2ಬಿಲಿಯನ್ ಡಾಲರ್ ವಹಿವಾಟು ನಡೆಸಿದೆ. ಭಾರತದ ಚಿತ್ರೋದ್ಯಮ ಕಡಿಮೆ ವಹಿವಾಟು ಹೊಂದಿದೆ ಎಂದು ಶಿಮಾರೂ ಎಂಟರ್‌ಟೈನ್‌ಮೆಂಟ್ ನಿರ್ದೇಶಕ ಹಿರೇನ್ ಗಾದಾ ಹೇಳಿದ್ದಾರೆ.
ವಾರ್ಷಿಕವಾಗಿ 600 ಮಿಲಿಯನ್ ಪೈರಸಿ ಡಿವಿಡಿಗಳು ಮಾರಾಟವಾಗುತ್ತಿದ್ದರೇ 20 ಮಿಲಿಯನ್ ಅಧಿಕೃತ ಡಿವಿಡಿಗಳು ಮಾರಾಟವಾಗುತ್ತಿವೆ. ಪ್ರತಿಯೊಂದು ಪೈರಸಿ ಡಿವಿಡಿಗಳಲ್ಲಿ ಗರಿಷ್ಠ 5 ಚಿತ್ರಕಥೆಗಳನ್ನು ಹೊಂದಿರುತ್ತವೆ ಎಂದು ಅಸಮದಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕದಲ್ಲಿ ಶೇ.40ರಷ್ಟು ವಹಿವಾಟು ಚಿತ್ರದ ಡಿವಿಡಿಗಳ ಮಾರಾಟದಿಂದ ಸಾಗುತ್ತದೆ. ಆದರೆ ಭಾರತದಲ್ಲಿ ಚಿತ್ರದ ಡಿವಿಡಿಗಳ ಮಾರಾಟ ಕೇವಲ ಶೇ. 7-8ರಷ್ಟಾಗಿದೆ. ಭಾರತದಲ್ಲಿ ಪೈರಸಿ ಹಾವಳಿಯಿಂದಾಗಿ ವಾರ್ಷಿಕವಾಗಿ 1ರಿಂದ 2ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಹರಿನ್ ಗಾದಾ ತಿಳಿಸಿದ್ದಾರೆ.