ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಒಬಿ ಬ್ಯಾಂಕ್‌ನಿಂದ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ (IOB | Lending rate | BPLR | ICICI Bank | RBI)
Bookmark and Share Feedback Print
 
ಸರಕಾರಿ ಸ್ವಾಮ್ಯದ ಇಂಡಿಯನ್ ಒವರ್‌ಸಿಸ್ ಬ್ಯಾಂಕ್(ಐಒಬಿ)ಬಡ್ಡಿ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಬ್ಯಾಂಕ್‌ನ ಪ್ರೈಮ್ ಲೆಂಡಿಂಗ್ ದರವನ್ನು ಅಗಸ್ಟ್ 23ರಿಂದ ಶೇ.12.5ಕ್ಕೆ ಏರಿಕೆಗೊಳಿಸಲಾಗಿದೆ ಎಂದು ಇಂಡಿಯನ್ ಒವರ್‌ಸಿಸ್ ಬ್ಯಾಂಕ್ ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಬಡ್ಡಿ ದರ ಏರಿಕೆ ಗೃಹ ಸಾಲಕ್ಕೆ ಅನ್ವಯಿಸುವುದಿಲ್ಲ. ಆದರೆ ವಾಹನೋದ್ಯಮ ಮತ್ತು ಕಾರ್ಪೋರೇಟ್ ಸಾಲಗಳು ತುಟ್ಟಿಯಾಗಲಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಸ್ಟ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್‌ಗಳು ಬಡ್ಡಿ ದರ ಏರಿಕೆ ಘೋಷಿಸಿದ ಕೆಲ ದಿನಗಳ ನಂತರ ಇಂಡಿಯನ್ ಒವರ್‌ಸಿಸ್ ಬ್ಯಾಂಕ್ ಕೂಡಾ ಬಡ್ಡಿ ದರದಲ್ಲಿ ಹೆಚ್ಚಳಗೊಳಿಸಿದೆ.

ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ, ಬ್ಯಾಂಕ್‌ಗಳು ಕೂಡಾ ಬಡ್ಡಿ ದರದಲ್ಲಿ ಏರಿಕೆ ಘೋಷಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ