ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನ ಮಧ್ಯೆಯು ಚಿನ್ನದ ಖರೀದಿಯಲ್ಲಿ ಇಳಿಕೆಯಾಗಿದ್ದರಿಂದ ಚಿನ್ನದ ದರದಲ್ಲಿ ಅಲ್ಪ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕೈಗಾರಿಕೋದ್ಯಮ ಕ್ಷೇತ್ರದಿಂದ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ, ಬೆಳ್ಳಿಯ ದರದಲ್ಲಿ ಕೂಡಾ ಅಲ್ಪ ಇಳಿಕೆಯಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಚಿನ್ನದ ದರ ಪ್ರತಿ 10ಗ್ರಾಂಗೆ 15 ರೂಪಾಯಿಗಳ ಇಳಿಕೆಯಾಗಿ, 18,720 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 230 ರೂಪಾಯಿಗಳ ಇಳಿಕೆಯಾಗಿ 29,515 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್ಗೆ 6.60 ಡಾಲರ್ಗಳ ಇಳಿಕೆಯಾಗಿ 1,228.80 ಡಾಲರ್ಗಳಿಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಔನ್ಸ್ಗೆ 18 ಡಾಲರ್ ಇಳಿಕೆಯಾಗಿ 1,228.80 ಡಾಲರ್ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.