ಕಾರು ಮಾರಾಟ ವಲಯದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಭಾರತದ ದೈತ್ಯ ಕಾರು ಉತ್ಪನ್ನ ಸಂಸ್ಥೆ ಮಾರುತಿ ಸುಝುಕಿ ಇಂಡಿಯಾ ಇದೀಗ ತನ್ನ ವಿದೇಶೀ ರಫ್ತನ್ನು ಶೇ.15ಕ್ಕೆ ಸೀಮಿತಗೊಳಿಸಲು ಚಿಂತನೆ ನಡೆಸುತ್ತಿದೆ.
ಮಾರುತಿ ಸುಝುಕಿ ಇಂಡಿಯಾದ ಅಧ್ಯಕ್ಷ ಆರ್.ಸಿ.ಭಾರ್ಗವ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಮಾರುತಿ ಸುಝುಕಿ ಸಂಸ್ಥೆ ತನ್ನ ವಿದೇಶೀ ರಫ್ತನ್ನು ಶೇ.15ಕ್ಕೆ ಸೀಮಿತಗೊಳಿಸಲು ಚಿಂತನೆ ನಡೆಸಿದೆ. ಜೊತೆಗೆ ದೇಶೀ ಬೇಡಿಕೆಯನ್ನು ಪೂರೈಸುವತ್ತ ಹೆಚ್ಚಿನ ಗಮನ ನೀಡಲಿದೆ ಎಂದು ತಿಳಿಸಿದರು.
ಆದರೆ ಈ ಮೊದಲಿನ ರಫ್ತನ್ನು ಪರಿಗಣಿಸಿದರೂ ಕೂಡಾ ಇದೇ ವಲಯವನ್ನು ಸಂಸ್ಥೆ ತಲುಪಿತ್ತು. ಈ ವರ್ಷದ ಏಪ್ರಿಲ್ -ಜುಲೈ ತಿಂಗಳ ದಾಖಲೆಗಳ ಪ್ರಕಾರ 3,35,394 ಯುನಿಟ್ ಕಾರು ಉತ್ಪಾದಿಸಲಾಗಿದ್ದು, 50,558 ಯುನಿಟ್ ರಫ್ತು ನಡೆಸಲಾಗಿದೆ. ಇದೂ ಕೂಡಾ ಒಟ್ಟು ಉತ್ಪನ್ನದ ಶೇ.15ರಷ್ಟಿದೆ.
ಇಡೀ ವರ್ಷ 2009-10ನೇ ಸಾಲಿನಲ್ಲಿ ಸಂಸ್ಥೆ 1.48 ಲಕ್ಷ ಯುನಿಟ್ ಕಾರು ರಫ್ತು ಮಾಡಲಾಗಿದೆ.