ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ 5 ಪೈಸೆ ಏರಿಕೆ ಕಂಡು 46.62 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಡಾಲರ್ ಎದುರಿಗೆ 12 ಪೈಸೆ ಕುಸಿತ ಕಂಡು 46.67/68 ರೂಪಾಯಿಗಳಿಗೆ ತಲುಪಿತ್ತು. ಆದರೆ, ಇಂದಿನ ಆರಂಭಿಕ ವಹಿವಾಟಿನಲ್ಲಿ, ಡಾಲರ್ ಎದುರಿಗೆ ರೂಪಾಯಿ 5 ಪೈಸೆ ಏರಿಕೆ ಕಂಡು 46.62 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳ ಹಾಗೂ ಡಾಲರ್ ಎದುರಿಗೆ ಇತರ ಕರೆನ್ಸಿಗಳ ಚೇತರಿಕೆಯಿಂದಾಗಿ, ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಏತನ್ಮದ್ಯೆ, ಮುಂಬೈ ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕ 43.25 ಪಾಯಿಂಟ್‌ಗಳ ಏರಿಕೆ ಕಂಡು 18,445.07 ಅಂಕಗಳಿಗೆ ತಲುಪಿದೆ.