ಕೈರ್ನ್ ಎನರ್ಜಿ ಇಂಡಿಯಾ ಕಂಪೆನಿಯನ್ನು ಖರೀದಿಸಿದ ಅನಿವಾಸಿ ಭಾರತೀಯ ಉದ್ಯಮಿ ಅನಿಲ್ ಅಗರ್‌ವಾಲ್, ದೇಶದ ಶ್ರೀಮಂತ ಉದ್ಯಮಿ ಎನ್ನುವ ಖ್ಯಾತಿಗೆ ಒಳಗಾದ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸ್ಟೆರ್ಲೈಟ್ ಎನರ್ಜಿ ಕಂಪೆನಿಯ ಸಂಚಾಲಕತ್ವವನ್ನು ಹೊಂದಿರುವ ಅಗರ್‌ವಾಲ್ ಕೈರ್ನ್ ಎನರ್ಜಿ ಇಂಡಿಯಾ ಕಂಪೆನಿಯ ಖರೀದಿಯೊಂದಿಗೆ ಒಟ್ಟು ಸಂಪತ್ತು 1,67,000 ಕೋಟಿ ರೂಪಾಯಿಗಳಿಗೆ ತಲುಪಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಮುಕೇಶ್ ಅಂಬಾನಿ 1,45,275 ಕೋಟಿ ರೂಪಾಯಿಗಳ ಸಂಪತ್ತನ್ನು ಹೊಂದಿದ್ದಾರೆ.
ಏತನ್ಮದ್ಯೆ,ಮುಕೇಶ್ ಸಂಚಾಲಿತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅಗರ್‌ವಾರ್ ಅವರ ವೇದಾಂತಾ ಕಂಪೆನಿಗಿಂತ ಸಂಪತ್ತಿನಲ್ಲಿ ಮುಂಚೂಣಿಯಲ್ಲಿದೆ. ಟಾಟಾ 3,70,000 ಕೋಟಿ ರೂಪಾಯಿ ಸಂಪತನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದ್ದು, ಉಭಯ ಉದ್ಯಮಿಗಳು ನಂತರದ ಸ್ಥಾನವನ್ನು ಪಡೆದಿದ್ದಾರೆ.
ಅಗರ್‌ವಾಲ್ ಉಕ್ಕು ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಉದ್ಯಮಿಯಾಗಿದ್ದಾರೆ. ಏತನ್ಮದ್ಯೆ, ಮುಕೇಶ್ ಪೆಟ್ರೋಕೆಮಿಕಲ್ಸ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿದ್ದಾರೆ.
ತೈಲ ಕಂಪನಿಯಾದ ಕೈರ್ನ್ ಎನರ್ಜಿ ಇಂಡಿಯಾ ಖರೀದಿಸುವ ಮೂಲಕ ಅಗರ್‌ವಾಲ್ ತೈಲ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಗರ್‌ವಾಲ್ ಪ್ರವೇಶದಿಂದಾಗಿ ತೈಲ ಕ್ಷೇತ್ರದಲ್ಲಿ ಮತ್ತಷ್ಟು ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.