ಎಲ್‌ಆಂಡ್ ಟಿಗೆ ಒಎನ್‌ಜಿಸಿಯಿಂದ 1,195 ಕೋಟಿ ರೂ.ಗುತ್ತಿಗೆ
ಮುಂಬೈ, ಸೋಮವಾರ, 23 ಆಗಸ್ಟ್ 2010( 15:58 IST )
ದೇಶದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಲಾರ್ಸನ್ ಆಂಡ್ ಟೌಬ್ರೋ, ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ (ಒಎನ್‌ಜಿಸಿ)ಸಂಸ್ಥೆಯಿಂದ 1,195 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆಯಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಹಾಜಿರಾ ಮತ್ತು ಉರನ್‌ದಲ್ಲಿ ಹೆಚ್ಚುವರಿ ಅನಿಲ ಉತ್ಪನ್ನ ಘಟಕಗಳನ್ನು ನಿರ್ಮಿಸಲು ಗುತ್ತಿಗೆಯನ್ನು ಪಡೆಯಲಾಗಿದೆ ಎಂದು ಎಲ್‌ಆಂಡ್‌ಟಿ ಕಂಪನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಪ್ರೋಜೆಕ್ಟ್ ಮ್ಯಾನೇಜ್‌ಮೆಂಟ್ ಕಟ್ಟಡ ನಿರ್ಮಾಣ, ಮತ್ತು ಇಂಜಿನಿಯರಿಂಗ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳ ವ್ಯವಸ್ಥಾಪನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗಿದೆ ಎಂದು ಎಲ್‍ಆಂಡ್‌ಟಿ ಮೂಲಗಳು ತಿಳಿಸಿವೆ.
ಎಲ್‌ಆಂಡ್‌ಟಿ ಕಂಪೆನಿ, ಕಾಕಿನಾಡಾದಲ್ಲಿ 9.8 ಬಿಲಿಯನ್ ಡಾಲರ್ ವೆಚ್ಚದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ನೈಸರ್ಗಿಕ ಅನಿಲ ಉತ್ಪಾದನೆ ಘಟಕವನ್ನು ನಿರ್ಮಿಸಿದೆ.
ಮುಂಬೈ ಶೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಎಲ್‌ಆಂಡ್ ಟಿ ಶೇರುಗಳು ಶೇ.0.05ರಷ್ಟು ಏರಿಕೆ ಕಂಡು ತಲಾ ಶೇರು ದರ 1,870 ರೂಪಾಯಿಗಳಿಗೆ ತಲುಪಿದೆ.