ವಾರ್ಷಿಕ ವಿದೇಶಾಂಗ ನೀತಿ ಸಭೆ ಮುಂದಿರುವಂತೆ, ಉಕ್ಕು ರಫ್ತು ವಹಿವಾಟಿಗೆ ಶೇ.3ರಷ್ಟು ಹೆಚ್ಚುವರಿ ರಿಯಾಯತಿಯನ್ನು ನೀಡಪವಂತೆ ಕೈಗಾರಿಕೋದ್ಯಮ ಸಂಘಟನೆಯಾದ ಎಫ್‌ಐಸಿಸಿಐ ಸರಕಾರಕ್ಕೆ ಒತ್ತಾಯಿಸಿದೆ.
ವಿದೇಶಾಂಗ ವಹಿವಾಟಿನ ಕುಸಿತದ ಮಧ್ಯದ ಅಂತರವನ್ನು ಭರ್ತಿ ಮಾಡಲು, ಉಕ್ಕು ರಫ್ತುವಹಿವಾಟಿನಲ್ಲಿ ಮತ್ತಷ್ಟು ರಿಯಾಯಿತಿಗಳನ್ನು ಘೋಷಿಸುವುದು ಅಗತ್ಯವಾಗಿದೆ ಎಂದು ಎಫ್‌ಐಸಿಸಿಐ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಅವಧಿಯ ಉಕ್ಕು ರಫ್ತು ವಹಿವಾಟಿನಲ್ಲಿ 4.06 ಮಿಲಿಯನ್ ಟನ್‌ಗಳಷ್ಟು ಕೊರತೆಯಾಗಿದೆ. 2007-08ರ ಅವಧಿಗೆ ಹೋಲಿಸಿದಲ್ಲಿ, ಉಕ್ಕು ರಫ್ತು ವಹಿವಾಟು ಮೂರುಪಟ್ಟು ಕುಸಿತ ಕಂಡಿದೆ.
2010-11ರ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ, ಉಕ್ಕು ರಫ್ತು ವಹಿವಾಟು ಶೇ.11ರಷ್ಟು ಕುಸಿತ ಕಂಡಿದೆ. ಆದರೆ, ಅಮುದು ವಹಿವಾಟಿನಲ್ಲಿ ಶೇ.66ರಷ್ಟು ಚೇತರಿಕೆ ಕಂಡಿದೆ.
ಭಾರತದ ರಫ್ತು ವಹಿವಾಟಿನಲ್ಲಿ ಕುಸಿತವಾಗುವ ಆತಂಕದಿಂದಾಗಿ, 2009-14ರ ಅವಧಿಯ ವಿದೇಶಾಂಗ ವಹಿವಾಟು ನೀತಿಯನ್ನು ಇಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ರಿಯಾಯತಿಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಎಫ್‌ಐಸಿಸಿಐ ಸಂಘಟನೆಯ ಮೂಲಗಳು ತಿಳಿಸಿವೆ.