ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಜಿನಿಯರಿಂಗ್ ರಫ್ತು ವಹಿವಾಟಿನಲ್ಲಿ ಶೇ.26ರಷ್ಟು ಹೆಚ್ಚಳ (Engineering exports | India | US | EEPC | Europe)
Bookmark and Share Feedback Print
 
ದೇಶದ ಇಂಜಿನಿಯರಿಂಗ್ ರಫ್ತು ವಹಿವಾಟು ಜುಲೈ ತಿಂಗಳಿಗೆ ಅಂತ್ಯಗೊಂಡಂತೆ, ಶೇ.26ರಷ್ಟು ಏರಿಕೆಯಾಗಿ 3.21 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಅಮೆರಿಕದಿಂದ ಇಂಜಿನಿಯರಿಂಗ್ ಕ್ಷೇತ್ರದ ವಸ್ತುಗಳ ವಹಿವಾಟಿನಲ್ಲಿ ಚೇತರಿಕೆಯಾಗುತ್ತಿದ್ದು, ಯುರೋಪ್ ಮಾರುಕಟ್ಟೆಗಳಿಂದ ಬೇಡಿಕೆಯಲ್ಲಿ ಕುಸಿತವಾಗಿದೆ ಎಂದು ಇಂಜಿನಿಯರಿಂಗ್ ಎಕ್ಸಪೋರ್ಟ್ ಕೌನ್ಸಿಲ್(ಇಇಪಿಸಿ)ಕಾರ್ಯಕಾರಿ ನಿರ್ದೇಶಕ ಆರ್.ಮೈತ್ರಾ ಹೇಳಿದ್ದಾರೆ.

ಯುರೋಪ್ ಮಾರುಕಟ್ಟೆಗಳ ಆರ್ಥಿಕ ಬಿಕ್ಕಟ್ಟಿನಿಂದಾಗಿ, ಬೇಡಿಕೆಯಲ್ಲಿ ಕುಸಿತವಾಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2009-10ರ ಅವಧಿಯ ಇಂಜಿನಿಯರಿಂಗ್ ರಫ್ತು ವಹಿವಾಟು 32.5 ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು. ಯುರೋಪ್ ರಾಷ್ಟ್ರಗಳಿಂದ ಕೇವಲ ಶೇ.30ರಷ್ಟು ಬೇಡಿಕೆ ಬಂದಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ