ಮಾಹಿತಿ ತಂತ್ರಜ್ಞಾನ ರಫ್ತು ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್(ಟಿಸಿಎಸ್), ಚೀನಾದಲ್ಲಿ ತನ್ನ ಐದನೇ ವಿತರಣಾ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಚೀನಾದ ಬೀಜಿಂಗ್, ಶಾಂಘೈ, ಹಾಂಗ್‌ಝೌ ಮತ್ತು ಟಿಯಾನ್‌ಜಿನ್ ನಂತರ ಇದೀಗ ಶೆನ್‌ಝೆನ್ ನಗರದಲ್ಲಿ ಟಿಸಿಎಸ್ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಟಾಟಾ ಗ್ರೂಪ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ನೂತನ ಕೇಂದ್ರ ಆರಂಭದೊಂದಿಗೆ ಚೀನಾದಲ್ಲಿ ಕಂಪೆನಿಯ ಉದ್ಯೋಗಿಗಳ ಸಂಖ್ಯೆ 2,000ಕ್ಕೆ ಏರಿಕೆಯಾಗಿದ್ದು,ಅದರಲ್ಲಿ ಶೇ.92ರಷ್ಟು ಉದ್ಯೋಗಿಗಳು ಚೀನಾದ ನಾಗರಿಕರಾಗಿದ್ದಾರೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಏಷ್ಯಾ-ಫೆಸಿಫಿಕ್ ಗ್ರಾಹಕರೊಂದಿಗೆ ಸುಲಭ ವಹಿವಾಟು ಹಾಗೂ ಸ್ಥಳೀಯ ಗ್ರಾಹಕರಿಗೆ ಸೇವೆಯನ್ನು ನೀಡಲು ಕೇಂದ್ರ ಸರಕಾರ, ಚೀನಾದಲ್ಲಿ ವಿತರಣಾ ಕೇಂದ್ರವನ್ನು ಆರಂಭಿಸಲು ಅನುಮತಿ ನೀಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.