ದೇಶದ ರಫ್ತು ವಹಿವಾಟು ಉದ್ಯಮಕ್ಕೆ ಚೇತರಿಕೆ ನೀಡಲು ಕೇಂದ್ರ ಸರಕಾರ, ರಫ್ತು ವಹಿವಾಟಿಗೆ 1,052 ಕೋಟಿ ರೂಪಾಯಿಗಳ ರಿಯಾಯತಿಯನ್ನು ಘೋಷಿಸಿದೆ.
ವಿಶೇಷವಾಗಿ ಜವಳಿ, ಕರಕುಶಳ, ಚರ್ಮೋದ್ಯಮ ಕ್ಷೇತ್ರಗಳಿಗೆ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಹೆಚ್ಚಿನ ರಿಯಾಯತಿಯನ್ನು ಪ್ರಕಟಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾವು ಆರ್ಥಿಕ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲವೆಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಆನಂದ್ ಶರ್ಮಾ ತಿಳಿಸಿದ್ದಾರೆ.
2009-14ರ ಅವಧಿಯ ವಾರ್ಷಿಕ ವಿದೇಶಾಂಗ ವಹಿವಾಟು ನಿಯಮಗಳನ್ನು ಬಿಡುಗಡೆ ಮಾಿದ ಸಚಿವ ಶರ್ಮಾ, ರಫ್ತು ವಹಿವಾಟು ಕಂಪೆನಿಗಳಿಗೆ 1,052 ಕೋಟಿ ರೂಪಾಯಿಗಳ ರಿಯಾಯತಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.