ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾದ ಸತ್ಯಂ ರಾಜು (Ramalinga Raju | Satyam Computer | Fraud case)
Bookmark and Share Feedback Print
 
ದೇಶದ ಕಾರ್ಪೋರೇಟ್ ವಲಯದಲ್ಲಿ ಅತಿ ದೊಡ್ಡ ಎನ್ನುವ ಅಪಖ್ಯಾತಿಗೆ ಒಳಗಾದ ಸತ್ಯಂ ಕಂಪ್ಯೂಟರ್ ಹಗರಣದ ರೂವಾರಿ ಬಿ.ರಾಮಲಿಂಗಾರಾಜು, ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ಸತ್ಯಂ ಕಂಪ್ಯೂಟರ್ಸ್‌ನ ಹಣಕಾಸಿನ ದಾಖಲೆಗಳನ್ನು ತಿರುಚಿದ ಆರೋಪವನ್ನು ಎದುರಿಸುತ್ತಿರುವ ರಾಜು, ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ.

ಹೈಪಾಟಿಟಿಸ್ -ಸಿ ರೋಗದಿಂದ ಬಳಲುತ್ತಿರುವ ರಾಜುಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿದೆ ಎಂದು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಆಂಧ್ರಪ್ರದೇಶದ ಹೈಕೋರ್ಟ್, ರಾಜುಗೆ ಷರತ್ತಿನ ಜಾಮೀನು ನೀಡಿ ಬಿಡುಗಡೆಗೆ ಆದೇಶ ಹೊರಡಿಸಿತ್ತು.

ಕಳೆದ ವರ್ಷದ ಜನವೆರಿ 9ರಂದು ಬಂಧಿತನಾಗಿದ್ದ ರಾಜು,ಪ್ರಸ್ತುತ ನಗರದ ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ