ಹಬ್ಬದ ಸೀಜನ್ ಸಂದರ್ಭದಲ್ಲಿ ಐದು ಟನ್ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಹಬ್ಬದ ಸಂದರ್ಭದಲ್ಲಿ ನಾಣ್ಯಗಳನ್ನು ಹಾಗೂ ಆಭರಣಗಳನ್ನು ಖರೀದಿಸುವುದು ಸಂಪ್ರದಾಯ. ಸಾಮಾನ್ಯ ಜನತೆ ಕೂಡಾ ನಾಣ್ಯಗಳ ಖರೀದಿಯಲ್ಲಿ ತೊಡಗುವುದು ಹೆಚ್ಚಳವಾಗಿದೆ. ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳು ಕೂಡಾ ತಿನ್ನದ ನಾಣ್ಯಗಳನ್ನು ಮಾರಾಟ ಮಾಡುತ್ತಿವೆ ಎಂದು ವಹಿವಾಟುದಾರರು ತಿಳಿಸಿದ್ದಾರೆ.
ಹಬ್ಬದ ಸಮಯದಲ್ಲಿ ಪ್ರತಿ ವರ್ಷ 10-15 ಟನ್ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಪ್ರಸಕ್ತ ಸಂದರ್ಭದಲ್ಲಿ ಐದು ಟನ್ ಚಿನ್ನದ ನಾಣ್ಯಗಳನ್ನು ಮಾರಾಟದ ಗುರಿಯನ್ನು ಹೊಂದಲಾಗಿದೆ ಎಂದು ರಿದ್ಧಿ ಸಿದ್ಧಿ ಬಿಲಿಯನ್ಸ್ ಮಾರುಕಟ್ಟೆಯ ವ್ಯವಸ್ಥಾಪಕ ನಿರ್ದೇಶಕ ಪ್ರಥ್ವಿರಾಜ್ ಕೊಠಾರಿ ತಿಳಿಸಿದ್ದಾರೆ.