ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೇದಾಂತಾ ಘಟಕ ಸ್ಥಾಪನೆಗೆ ಕೇಂದ್ರದ ವಿರೋಧ (MoEF | Environment | Vedanta | Orissa | Posco | Saxena committee)
Bookmark and Share Feedback Print
 
ಅನಿಲ್ ಅಗರ್‌ವಾಲ್ ಸಂಚಾಲಿತ ಒರಿಸ್ಸಾದ ನೇದಾಂತಾ ಗಣಿಗಾರಿಕೆ ಯೋಜನೆಗೆ ಕೇಂದ್ರದ ಪರಿಸರ ಮತ್ತು ಅರಣ್ಯ ಖಾತೆ ಸಚಿವಾಲಯ ಅನುಮತಿ ನಿರಾಕರಿಸಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ವೇದಾಂತಾ ಘಟಕ ಸ್ಥಾಪನೆಗಾಗಿ ಅರಣ್ಯಪ್ರದೇಶವನ್ನು ತೆರುವುಗೊಳಿಸುವ ಸಂಸ್ಥೆಯ ಮನವಿಗೆ ಸರಕಾರ ತಿರಸ್ಕರಿಸಿದ್ದು, ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವೇದಾಂತಾ ಮತ್ತು ಪೊಸ್ಕೊ ಯೋಜನೆಗಳಲ್ಲಿ ಪರಿಸರ ಮತ್ತು ಅರಣ್ಯ ಇಲಾಖೆ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಪರಿಸರ ಸಚಿವಾಲಯ ನೇಮಿಸಿದ ಎನ್‌.ಸಿ.ಸೆಕ್ಸೆನಾ ಸಮಿತಿ ವರದಿ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪ್ರಧಾನಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸೆಕ್ಸೆನಾ ಸಮಿತಿ, ವೇದಾಂತಾ ಮತ್ತು ಪೊಸ್ಕೊ ಯೋಜನೆಗಳನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ್ದು, ಹಲವಾರು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ