ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೇದಾಂತಾ ಘಟಕ ಸ್ಥಾಪನೆಗೆ ಕೇಂದ್ರ ಸರಕಾರ ವಿರೋಧ (Vedanta | Bauxite site | Government | Mineral.)
Bookmark and Share Feedback Print
 
ವೇದಾಂತಾ ಕಂಪೆನಿ ಒರಿಸ್ಸಾದ ನಿಯಾಮ್‌ಗಿರಿ ಪ್ರದೇಶದಲ್ಲಿ 1.7 ಬಿಲಿಯನ್ ಡಾಲರ್ ವೆಚ್ಚದ ಅಲುಮಿನಿಯಂ ಘಟಕ ಸ್ಥಾಪನೆಗೆ ಕೇಂದ್ರ ಸರಕಾರ ವಿರೋಧ ವ್ಯಕ್ತಪಡಿಸಿದ್ದರಿಂದ, ಇತರ ಸ್ಥಳಗಳಲ್ಲಿ ಘಟಕ ಸ್ಥಾಪನೆಗೆ ಹುಡುಕಾ ಆರಂಭಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ವೇದಾಂತಾ ರಿಸೊರ್ಸೆಸ್ ಕಂಪೆನಿ, ಯಾವುದೇ ಪರಿಸರ ಹಾಗೂ ಅರಣ್ಯ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿಲ್ಲ. ಕೇಂದ್ರ ಸರಕಾರದ ಅನುಮತಿ ದೊರೆಯುವವರೆಗೆ ಕಾರ್ಯಾರಂಭ ಮಾಡುವುದಿಲ್ಲ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಒರಿಸ್ಸಾದ ರಾಜ್ಯ ಸರಕಾರ ಲಂಜಿಘರ್‌ ರಿಫೈನರಿ ಪ್ರದೇಶದಲ್ಲಿ 1.7 ಬಿಲಿಯನ್ ಡಾಲರ್ ವೆಚ್ಚದ ಬಾಕ್ಸೈಟ್ ಉತ್ಪಾದನೆ ಘಟಕ ಸ್ಥಾಪನೆಗೆ ಅನುಮತಿ ನೀಡಿದ್ದು,ವಾರ್ಷಿಕವಾಗಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸಲು ನಿರ್ಧರಿಸಲಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ವೇದಾಂತಾ ಘಟಕದಿಂದ ಭಾರಿ ಪ್ರಮಾಣದಲ್ಲಿ ಪರಿಸರ ಹಾಗೂ ಅರಣ್ಯ ಕಾಯ್ದೆಗಳನ್ನು ಉಲ್ಲಂಘಸೆಯಾಗಿರುವುದರಿಂದ ಶೋಕಾಸ್ ನೋಟಿಸ್‌ಗೆ ಜಾರಿ ಮಾಡಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ