ಪೇಟೆಂಟ್ ಔಷಧಿಗಳ ದರಗಳ ಏರಿಕೆಯಿಂದ ಕಳವಳಗೊಂಡಿರುವ ಕೇಂದ್ರ ಸರಕಾರ, ಔಷಧೀಯ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಬಿಗಿಯಾದ ನಿಯಮಗಳು ಮತ್ತು ಕಡ್ಡಾಯವಾಗಿ ಅನುಮತಿ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಮೂಲಗಳು ತಿಳಿಸಿವೆ.
ಕಡ್ಡಾಯ ಪರವಾನಿಗಿ ವ್ಯವಸ್ಥೆಯಿಂದಾಗಿ ಸರಕಾರ, ಪೇಟೆಂಟ್ ಹೋಲ್ಡರ್ ಹೊರತುಪಡಿಸಿ ಇತರ ಕಂಪೆನಿಗಳು ಪೇಟೆಂಟ್ ಹೋಲ್ಡರ್ ಅನುಮತಿಯಿಲ್ಲದೆ ಔಷಧಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಬಹುದಾಗಿದೆ.
ಭಾರತ ಇಲ್ಲಿಯವರೆಗೆ ಇಂತಹ ಯಾವುದೇ ಪರವಾನಿಗಿ ನೀಡಿಲ್ಲ, ಆದರೆ, ಪೇಟೆಂಟ್ ಕಾಯ್ದೆಗೆ ತಿದ್ದುಪಡಿಗೆ ತರಲು ನಿರ್ಧರಿಸಲಾಗಿದೆ. ಏತನ್ಮಧ್ಯೆ, ಅಮೆರಿಕ, ಇಂಗ್ಲೆಂಡ್, ಇಟಲಿ, ಥೈಲೆಂಡ್, ಇಂಡೋನೇಷ್ಯಾ ಮತ್ತು ಬ್ರೆಜಿಲ್ ರಾಷ್ಟ್ರಗಳು ಇಂತಹ ಕಾಯ್ದೆಯನ್ನು ಈಗಾಗಲೇ ಜಾರಿಗೆ ತಂದಿವೆ.
ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಆನಂದ್ ಶರ್ಮಾ, ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರಿಗೆ ಪತ್ರವೊಂದನ್ನು ಬರೆದು ಭಾರತೀಯ ಪೇಟೆಂಟ್ ಕಾಯ್ದೆಯನ್ವಯ ಪರವಾನಿಗಿ ಕಡ್ಡಾಯಗೊಳಿಸುವಂತೆ ಮನವಿ ಮಾಡಿದ್ದಾರೆ.