ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೋಧಿ ಅಮುದು ತೆರಿಗೆ ಪ್ರಸ್ತಾವನೆ ನಿರ್ಧಾರವಿಲ್ಲ:ಸಿಂಧಿಯಾ (Wheat imports | Lawmakers | Food grains | Parliament)
Bookmark and Share Feedback Print
 
ಗೋಧಿ ಅಮುದು ತೆರಿಗೆ ಹಾಗೂ ಬಾಸ್ಮತಿ-ರಹಿತ ಭತ್ತದ ನಿಷೇಧವನ್ನು ಭಾಗಾಂಶ ಹಿಂದಕ್ಕೆ ಪಡೆಯುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಕೇಂದ್ರದ ವಾಣಿಜ್ಯ ಖಾತೆ ರಾಜ್ಯ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಸರಕಾರ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿರಿಸಿದ್ದು, ಆಹಾರ ಧಾನ್ಯಗಳ ಮಾರಾಟದಿಂದ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಸಿಂಧಿಯಾ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಕಡಿಮೆ ದರದ ಗೋಧಿ ಅಮುದನ್ನು ನಿಯಂತ್ರಿಸಲು, ಸರಕಾರ ತೆರಿಗೆಯನ್ನು ವಿಧಿಸುವ ಸಾಧ್ಯತೆಗಳಿವೆ ಎಂದು ಕೈಗಾರಿಕೋದ್ಯಮ ಅಧಿಕಾರಿಗಳು ನಿರೀಕ್ಷಿಸಿದ್ದರು. ಆದರೆ, ಜಾಗತಿಕ ಮಾರುಕಟ್ಟೆಗಳಲ್ಲಿ ಗೋಧಿ ದರ ಕೆಲ ತಿಂಗಳುಗಳಿಂದ ಏರಿಕೆ ಕಂಡಿದೆ. ವಿದೇಶಗಳಿಗೆ ಹೋಲಿಸಿದಲ್ಲಿ, ದೇಶಿಯ ಮಾರುಕಟ್ಟೆಗಳಲ್ಲಿ ಗೋಧಿ ದರ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಬಡವರಿಗೆ ಕಡಿಮೆ ದರದಲ್ಲಿ ವಿತರಿಸಲು ಸಾಮಾನ್ಯ ದರ್ಜೆಯ ಭತ್ತದ ಅಮುದಿಗೆ ಸರಕಾರ ವಿರೋಧ ವ್ಯಕ್ತಪಡಿಸಿದೆ ಎಂದು ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ