ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2012ರ ವೇಳೆಗೆ ಉತ್ಪಾದನಾ ಸಾಮರ್ಥ್ಯ ದ್ವಿಗುಣ:ಸುಝುಕಿ (Suzuki Motor Corp | Suzuki Motorcycle India Pvt Ltd | Double capacity)
Bookmark and Share Feedback Print
 
ಜಪಾನ್‌ನ ಸುಝುಕಿ ಮೋಟಾರ್ ಕಾರ್ಪೋರೇಶನ್‌‌ನ ಭಾರತದಲ್ಲಿರುವ ಘಟಕದ ಸಾಮರ್ಥ್ಯವನ್ನು ಮುಂಬರುವ 2012 ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.

ಜಾಗತಿಕ ಆರ್ಥಿಕತೆ ಚೇತರಿಕೆ ಹಾಗೂ ಆದಾಯ ಹೆಚ್ಚಳ ಮತ್ತು ನೂತನ ಮಾಡೆಲ್‌ ವಾಹನಗಳ ಬೇಡಿಕೆಗಳಿಂದಾಗಿ, ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಸುಝುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪ್ರಸ್ತುತ ವಾರ್ಷಿಕ 250,000 ವಾಹನಗಳನ್ನು ಉತ್ಪಾದಿಸಲಾಗುತ್ತಿದ್ದು,ಮುಂಬರುವ 2012ರವರೆಗೆ ಉತ್ಪಾದನಾ ಸಾಮರ್ಥ್ಯವನ್ನು 540,000 ವಾಹನಗಳಿಗೆ ಹೆಚ್ಚಿಸಲಾಗುವುದು ಎಂದು ಕಂಪೆನಿಯ ಮುಖ್ಯಸ್ಥ ಕಾಟ್‌ಸುಮಿ ಟಕಾಟಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಝುಕಿ ಮೋಟಾರ್ ಸೈಕಲ್ ಇಂಡಿಯಾ ದೆಹಲಿಯ ಹತ್ತಿರದಲ್ಲಿರುವ ಗುರ್ಗಾಂವ್‌‌ನಲ್ಲಿ 37 ಏಕರೆ ಭೂಮಿಯಲ್ಲಿ ಘಟಕವನ್ನು ಆರಂಭಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಭಾರತದಲ್ಲಿ ಸುಝುಕಿ ದ್ವಿಚಕ್ರವಾಹನ ಮಾರಾಟ, ಜುಲೈ ತಿಂಗಳ ಅವಧಿಯಲ್ಲಿ ಶೇ.30ರಷ್ಟು ಏರಿಕೆಯಾಗಿ 710,621 ವಾಹನಗಳನ್ನು ಮಾರಾಟ ಮಾಡಲಾಗಿದೆ.ಸ್ಕೂಟರ್ ಮಾರಾಟದಲ್ಲಿ ಶೇ.36ರಷ್ಟು ಹೆಚ್ಚಳವಾಗಿ 167,195 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ